ಬೆಂಗಳೂರು: ದಕ್ಷಿಣ ಏಷ್ಯಾದ ಪ್ರಮುಖ ಮೊಬೈಲ್ ಪಾವತಿ ಸಂಸ್ಥೆಯಾಗಿರುವ ಗ್ರ್ಯಾಬ್, ಬೆಂಗಳೂರಿನ ಪಾವತಿ ಸ್ಟಾರ್ಟ್ಅಪ್ ಕಂಪನಿ ಐಕಾಜ್
ಸ್ವಾಧೀನಪಡಿಸಿಕೊಂಡಿದೆ.
‘ಇನ್ನು ಮುಂದೆ ಐಕಾಜ್ನ ನುರಿತ ಪರಿಣತರ ತಂಡವು ಗ್ರ್ಯಾಬ್ನ ಪಾವತಿ ಸೇವೆಯಾದ ಗ್ರ್ಯಾಬ್ಪೇ ಜತೆ ಕೆಲಸ ಮಾಡಲಿದ್ದಾರೆ. ಈ ಸೇವೆಗೆ ಅಗತ್ಯವಾದ ತಂತ್ರಜ್ಞಾನಗಳನ್ನೂ ಅಭಿವೃದ್ಧಿ
ಪಡಿಸಲಿದ್ದಾರೆ. 2018 ರ ಅಂತ್ಯದ ವೇಳೆಗೆ ಆಗ್ನೇಯ ಏಷ್ಯಾದ ಎಲ್ಲಾ ಮಾರುಕಟ್ಟೆಗಳಲ್ಲಿ ಮುಂಚೂಣಿಗೆ ಬರುವ ಗುರಿಯನ್ನು ಹಾಕಿಕೊಳ್ಳಲಾಗಿದೆ’ ಎಂದು ಐಕಾಜ್ನ ಸ್ಥಾಪಕ ಸೋಮ ಸುಂದರಂ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.