ADVERTISEMENT

ಒಂಟಿ ಪೋಷಕರಿಗೆ ಹಣಕಾಸು ಯೋಜನೆ

ಶೈಲೇಶ್‌ ಸಿಂಗ್‌ ಜೆ.
Published 30 ಜನವರಿ 2018, 19:30 IST
Last Updated 30 ಜನವರಿ 2018, 19:30 IST
ಒಂಟಿ ಪೋಷಕರಿಗೆ ಹಣಕಾಸು ಯೋಜನೆ
ಒಂಟಿ ಪೋಷಕರಿಗೆ ಹಣಕಾಸು ಯೋಜನೆ   

ಒಂಟಿ ಪೋಷಕರಾಗಿ (Single Parents) ಮಕ್ಕಳ ಲಾಲನೆ – ಪಾಲನೆ ಮಾಡುವುದು ಅಷ್ಟು ಸುಲಭವಲ್ಲ. ಮಕ್ಕಳ ಸುರಕ್ಷತೆ ಮತ್ತು ಜವಾಬ್ದಾರಿಯನ್ನು ಹೆಚ್ಚು ಮುತುವರ್ಜಿಯಿಂದ ನಿಭಾಯಿಸಬೇಕಾಗುತ್ತದೆ. ಮಕ್ಕಳ ಬಗ್ಗೆ ನೀವು ಎಷ್ಟೇ ಕಾಳಜಿವಹಿಸಿದ್ದರೂ ಕೆಲವು ಬಾರಿ ನಿರೀಕ್ಷಿಸಲಾಗದ ಸನ್ನಿವೇಶ, ಸಂದರ್ಭಗಳು ಒದಗಬಹುದು.

ಇತ್ತೀಚೆಗೆ ನನ್ನ ಸ್ನೇಹಿತೆಯಿಂದ ದೂರವಾಣಿ ಕರೆ ಬಂದಿತ್ತು. ಅವಳಿಗೆ ನಾಲ್ಕು ವರ್ಷದ ಮಗುವಿತ್ತು. ಅವಳು ತನ್ನ ಆತಂಕವೊಂದನ್ನು ನನ್ನ ಜತೆ ಹಂಚಿಕೊಂಡಿದ್ದಳು. ಹಣಕಾಸು ಸಲಹೆಗಾರ ಜತೆ ವಿಮಾ ಪಾಲಿಸಿ ಬಗ್ಗೆ ಚರ್ಚೆ ಮಾಡಿದ್ದಳು. ಈ ವಿಮಾ ಪಾಲಿಸಿಗಳು ಭವಿಷ್ಯಕ್ಕೆ ಅಗತ್ಯವಿರುವಷ್ಟು ಮೊತ್ತವನ್ನು ಕಲ್ಪಿಸುವುದಿಲ್ಲ ಎನ್ನುವ ಆತಂಕ ಅವಳಿಗೆ ಎದುರಾಗಿತ್ತು. ಹಣಕಾಸಿನ ಜ್ಞಾನ ಕಡಿಮೆ ಇದ್ದವರಿಗೆ ಮತ್ತು ಜೀವ ವಿಮೆ ಪಾಲಿಸಿ ಮೇಲೆ ಅವಲಂಬಿತರಾದವರಿಗೆ ಇಂತಹ ವಿಚಾರಗಳು ಆಘಾತ ನೀಡುತ್ತವೆ. ಹೀಗಾಗಿ, ನಾನು ಈ ಪಾಲಿಸಿ ಮಹತ್ವ ಆಕೆಗೆ ಎಷ್ಟರಮಟ್ಟಿಗೆ ಇದೆ ಎನ್ನುವ ಬಗ್ಗೆ ಆಕೆಗೆ ಮನದಟ್ಟು ಮಾಡಿಕೊಟ್ಟೆ. ಅವಳು ವ್ಯಕ್ತಪಡಿಸಿದ್ದ ಆತಂಕ ಸಮರ್ಥನೀಯವಾಗಿತ್ತು. ಈ ಪಾಲಿಸಿ ಮಕ್ಕಳ ಯೋಜನೆಗೆ ಸಂಬಂಧಿಸಿದ್ದಾಗಿತ್ತು. ಜತೆಗೆ ಅಪಘಾತದಲ್ಲಿ ಸಾವಿಗಿಡಾದರೆ ಪರಿಹಾರ ಒದಗಿಸುವುದಾಗಿತ್ತು.

ಈ ಪಾಲಿಸಿಯಿಂದ ದೊರೆಯುವ ಲಾಭದ ಬಗ್ಗೆ ನಾನು ವಿವರಿಸಿದೆ. ತುರ್ತು ಸಂದರ್ಭಗಳಲ್ಲಿ ಸಿಗುವ ಪರಿಹಾರ ಸೇರಿದಂತೆ ಇದರಿಂದ ದೊರೆಯುವ ಲಾಭದ ಬಗ್ಗೆ ಸಮಗ್ರ ಮಾಹಿತಿ ನೀಡಿದೆ. ಇದರಿಂದ ಅವಳು ನಿರಾಳಗೊಂಡಳು.

ADVERTISEMENT

ಈ ಪ್ರಕರಣದಿಂದ ಜೀವ ವಿಮೆ ಪಾಲಿಸಿ ಒಂಟಿ ಪೋಷಕರಿಗೆ ಎಷ್ಟು ಮುಖ್ಯವಾಗುತ್ತದೆ ಎನ್ನುವ ಸಂಗತಿ ಅರಿವಿಗೆ ಬಂದಿತು.

ಸಮಗ್ರವಾದ ಹಣಕಾಸು ವ್ಯವಸ್ಥೆ ಒದಗಿಸುವ ಕ್ರಮಗಳನ್ನು ಪ್ರತಿಯೊಬ್ಬರೂ ಕೈಗೊಳ್ಳುವುದು ಅಗತ್ಯ. ಒಂಟಿ ಪೋಷಕರಿಗೆ ಇದು ಇನ್ನೂ ಹೆಚ್ಚು ಮುಖ್ಯವಾಗುತ್ತದೆ. ಆಕಸ್ಮಿಕವಾಗಿ ಪೋಷಕರು ಸಾಲದಲ್ಲೇ ಮುಳುಗಿದ್ದಾಗಲೇ ಮೃತಪಟ್ಟರೆ ಮಕ್ಕಳು ಸಂಕಷ್ಟಕ್ಕೀಡಾಗಬೇಕಾಗುತ್ತದೆ.

ಹೀಗಾಗಿ ಒಂಟಿ ಪೋಷಕರು ಯಾವ ರೀತಿ ಹಣಕಾಸಿನ ಯೋಜನೆಗಳನ್ನು ರೂಪಿಸಿಕೊಳ್ಳಬೇಕು ಎನ್ನುವುದು ಬಹಳ ಮುಖ್ಯವಾದ ವಿಚಾರವಾಗಿರುತ್ತದೆ. ಇದರಿಂದ, ಮಕ್ಕಳಿಗೆ ಹಣಕಾಸಿನ ಯಾವುದೇ ರೀತಿ ತೊಂದರೆಯಾಗಬಾರದು.

ಭದ್ರತೆ ಒದಗಿಸುವ ಹಣಕಾಸಿನ ಯೋಜನೆಗಳಲ್ಲಿ ಹೂಡಿಕೆ

ಕುಟುಂಬಕ್ಕೆ ಅಗತ್ಯವಿರುವಂತೆ ವಿವಿಧ ಹಣಕಾಸಿನ ಯೋಜನೆಗಳನ್ನು ಪಟ್ಟಿ ಮಾಡಿ ಹಣಕಾಸಿನ ಅಗತ್ಯಗಳ ತಕ್ಕಂತೆ ವೆಚ್ಚದ ಯೋಜನೆ ರೂಪಿಸಬೇಕು.  ಶಿಕ್ಷಣ, ವೃತ್ತಿ ಮತ್ತು ಮದುವೆ ಅನಿವಾರ್ಯ ಸಂಗತಿಗಳು. ಇವೆಲ್ಲಕ್ಕೂ ಖರ್ಚು ಸರಿದೂಗಿಸುವಂತಹ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು.

ಜತೆಗೆ ಒಂಟಿ ಪೋಷಕರು ಮನೆ ಬಾಡಿಗೆ ಅಥವಾ ಇಎಂಐ ಪಾವತಿಸುವ ಬಗ್ಗೆ ಮತ್ತು ದಿನನಿತ್ಯದ ಖರ್ಚುಗಳನ್ನು ನಿಭಾಯಿಸಬೇಕಾಗುತ್ತದೆ. ಹೀಗಾಗಿ, ಎಚ್ಚರಿಕೆಯಿಂದ ಹೂಡಿಕೆ ಮಾಡಬೇಕು. ವಿಮಾ ಪಾಲಿಸಿಯೂ ಇದಕ್ಕೆ ಒಂದು ರೀತಿಯಲ್ಲಿ ಪರಿಹಾರ ಒದಗಿಸಬಲ್ಲದು.

ವಿಮೆ ಪಾಲಿಸಿಗಳು ಅಪಾಯದ ಸಂದರ್ಭಕ್ಕೂ ಅನ್ವಯವಾಗುತ್ತವೆ. ಹಣಕಾಸಿನ ಅಗತ್ಯಕ್ಕೆ ತಕ್ಕಂತೆ ಜೀವ ವಿಮೆ ಪಾಲಿಸಿಗಳನ್ನು ಮಾಡಬಹುದು.  ಆಸ್ತಿ, ಹೂಡಿಕೆ ಮುಂತಾದ ಎಲ್ಲ ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಒಂದೇ ಪಾಲಿಸಿಯನ್ನು ಖರೀದಿ ಮಾಡುವ ಬದಲು ಅಗತ್ಯಕ್ಕೆ ತಕ್ಕಂತೆ ಪಾಲಿಸಿಗಳ ಬಗ್ಗೆ ಪರಿಶೀಲಿಸಬೇಕು. ತಿಂಗಳ ಆದಾಯ ಮತ್ತು ಒಂದೇ ದೊಡ್ಡ ಮೊತ್ತ ದೊರೆಯುವ ಹಣಕಾಸಿನ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು.

ಪೋಷಕರ ಗೈರು ಹಾಜರಾತಿಯಲ್ಲಿ ಅವಲಂಬಿತರಿಗೆ ನಿಯಮಿತವಾಗಿ ನಗದು ಹಣ ದೊರೆಯುವಂತಾಗಿರಬೇಕು. ದೊಡ್ಡ ಮೊತ್ತ ಪಡೆಯುವುದು ಒಳ್ಳೆಯ ಯೋಜನೆ. ಮಕ್ಕಳು ಅದನ್ನು ಸುಲಭವಾಗಿ ಖರ್ಚು ಮಾಡಲು ಸಾಧ್ಯವಾಗುವುದಿಲ್ಲ.

ಆದ್ದರಿಂದ ನಿರ್ದಿಷ್ಟ ವರ್ಷಗಳವರೆಗೆ ಹಣ ದೊರೆಯುವಂತೆ ಹಣಕಾಸಿನ ಯೋಜನೆಗಳಲ್ಲಿ ತೊಡಗಿಸಿಕೊಳ್ಳಬೇಕು.

ಇದಕ್ಕಾಗಿ ಪ್ರತಿ ತಿಂಗಳೂ ಒಂದು ನಿರ್ದಿಷ್ಟ ಮೊತ್ತವನ್ನು ವ್ಯಯಿಸಬೇಕಾಗುತ್ತದೆ. ಕೆಲವು ಯೋಜನೆಗಳಲ್ಲಿ ಪ್ರತಿ ತಿಂಗಳ ಮೊತ್ತವನ್ನು ಹೆಚ್ಚಿಸುವ ಅವಕಾಶವಿರುತ್ತದೆ. ಇಂತಹ ಯೋಜನೆಗಳಿಂದ ಮನೆ ನಿರ್ವಹಣೆ ಜತೆ ತಾಳೆ ಹಾಕಿ ಲೆಕ್ಕಾಚಾರ ಹಾಕಬಹುದು.

ನಿವೃತ್ತಿ ಯೋಜನೆ ಮರೆಯಬೇಡಿ

ಎಲ್ಲ ಜವಾಬ್ದಾರಿಗಳ ನಡುವೆಯೂ ಒಂಟಿ ಪೋಷಕರು ನಿವೃತ್ತಿ ಯೋಜನೆಯನ್ನು ಮರೆಯಬಾರದು. ನಿವೃತ್ತಿದಾರರಿಗಾಗಿಯೇ ಹಲವಾರು ಹಣಕಾಸು ಯೋಜನೆಗಳಿವೆ.

ನಿವೃತ್ತಿಯಾಗುವ ಮುನ್ನವೇ ಒಂದು ನಿರ್ದಿಷ್ಟ ಮೊತ್ತವನ್ನು ಕೂಡಿಡುವುದು ಉತ್ತಮ. ಒಂಟಿ ಪೋಷಕರು ಮಕ್ಕಳ ಎಲ್ಲ ಅಗತ್ಯಗಳನ್ನು ಈಡೇರಿಸುವ ಕಡೆಗೂ ಗಮನ ಹರಿಸಬೇಕಾಗುತ್ತದೆ. ಆದ್ದರಿಂದ, ಉತ್ತಮವಾದ ಹಣಕಾಸಿನ ಯೋಜನೆಗಳಿಂದ ಮಕ್ಕಳ ಭವಿಷ್ಯ ರೂಪಿಸಬಹುದು. ಇದರಿಂದ, ನೈತಿಕವಾಗಿಯೂ ಮತ್ತು ಹಣಕಾಸು ನಿರ್ವಹಣೆ ದೃಷ್ಟಿಯಿಂದಲೂ ಸ್ವತಂತ್ರರನ್ನಾಗಿ ರೂಪಿಸಬಹುದು.

(ಮ್ಯಾಕ್ಸ್‌ ಲೈಫ್‌ ಇನ್ಶುರೆನ್ಸ್‌ನ ಮುಖ್ಯ ಗ್ರಾಹಕ ಅಧಿಕಾರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.