ADVERTISEMENT

ದೇಶಿ ಐ.ಟಿ ಉದ್ದಿಮೆಗೆ ಉತ್ತಮ ದಿನಗಳು:‘ನಾಸ್ಕಾಂ’ ಅಂದಾಜು

ಪಿಟಿಐ
Published 8 ಫೆಬ್ರುವರಿ 2018, 19:56 IST
Last Updated 8 ಫೆಬ್ರುವರಿ 2018, 19:56 IST
ಆರ್‌. ಚಂದ್ರಶೇಖರ್‌
ಆರ್‌. ಚಂದ್ರಶೇಖರ್‌   

ಹೈದರಾಬಾದ್: ದೇಶಿ ಮಾಹಿತಿ ತಂತ್ರಜ್ಞಾನ (ಐ.ಟಿ) ಉದ್ದಿಮೆಗೆ 2018ರಲ್ಲಿ ಉತ್ತಮ ದಿನಗಳು ಕಾದಿವೆ ಎಂದು ಸಾಫ್ಟ್‌ವೇರ್‌ ಮತ್ತು ಸೇವಾ ಸಂಸ್ಥೆಗಳ ರಾಷ್ಟ್ರೀಯ ಒಕ್ಕೂಟ (ನಾಸ್ಕಾಂ) ಅಂದಾಜಿಸಿದೆ.

‘ಜಾಗತಿಕ ಮತ್ತು ಅಮೆರಿಕದ ಅರ್ಥ ವ್ಯವಸ್ಥೆಯಲ್ಲಿ ಸುಧಾರಣೆ ಕಂಡು ಬರುತ್ತಿದೆ. ಇದರಿಂದ ಐ.ಟಿ ವೆಚ್ಚ ಹೆಚ್ಚಲಿದೆ. ಹೀಗಾಗಿ ದೇಶಿ ಐ.ಟಿ ಉದ್ದಿಮೆಗೆ ಈ ವರ್ಷ ಬಹುಮಟ್ಟಿಗೆ ಉತ್ತಮವಾಗಿರಲಿದೆ’ ಎಂದು ‘ನಾಸ್ಕಾಂ’ ಅಧ್ಯಕ್ಷ ಆರ್. ಚಂದ್ರಶೇಖರ್‌ ವಿಶ್ಲೇಷಿಸಿದ್ದಾರೆ.

‘ಈ ವರ್ಷ ಐ.ಟಿ ಉದ್ದಿಮೆಯ ವಹಿವಾಟು ಕುಸಿಯಲಿದೆಯೆಂದು ಊಹಿಸುವುದಾಗಲಿ ಅಥವಾ ಭಾರಿ ಚೇತರಿಕೆ ಕಾಣಲಿದೆ ಎಂದು ಭವಿಷ್ಯ ನುಡಿಯಲು ಸಾಧ್ಯವಿಲ್ಲ. ಇವೆರೆಡರ ಮಧ್ಯೆ ಏನು ಬೇಕಾದರೂ ಘಟಿಸಬಹುದು.  ಜಾಗತಿಕ ಮತ್ತು ಅಮೆರಿಕದ ಆರ್ಥಿಕತೆಯು ಸಕಾರಾತ್ಮಕವಾಗಿರುವುದು ಕಂಡು ಬರುತ್ತಿದೆ. ಇದು ತಕ್ಷಣಕ್ಕೆ ದೊಡ್ಡ ಪ್ರಮಾಣದಲ್ಲಿ ಐ.ಟಿ ಉದ್ದಿಮೆಯ ವಹಿವಾಟನ್ನು ಹೆಚ್ಚಿಸಲಾರದು.

ADVERTISEMENT

‘ಸದ್ಯಕ್ಕೆ ಉದ್ದಿಮೆ ಎದುರಿಸುತ್ತಿರುವ ಸವಾಲುಗಳೆಲ್ಲ ದೂರವಾಗಿವೆ ಎಂದೂ ನಿರ್ಣಯಕ್ಕೆ ಬರಲೂ ಸಾಧ್ಯವಿಲ್ಲ. ಜಾಗತಿಕ ಆರ್ಥಿಕತೆಯ ಅಲ್ಪಾವಧಿಯ ಮುನ್ನೋಟವು ಆಶಾದಾಯಕವಾಗಿದೆ. ಐ.ಟಿ ವೆಚ್ಚ ಹೆಚ್ಚಳವು ಸದ್ಯಕ್ಕೆ ಅನುಭವಕ್ಕೆ ಬರಲಿಕ್ಕಿಲ್ಲ. ಕ್ರಮೇಣ ಅದು ಹೆಚ್ಚಳಗೊಳ್ಳಲಿದೆ. ಇದು ದೇಶಿ ಐ.ಟಿ ಉದ್ದಿಮೆಗೆ ನೆರವಾಗಲಿದೆ. ಹಳೆಯ ಸವಾಲುಗಳು ಇನ್ನೂ ಕೊನೆಗೊಂಡಿಲ್ಲ. ಕೆಲ ಹೊಸ ಸಮಸ್ಯೆಗಳೂ ಎದುರಾಗಲಿವೆ. ಜಾಗತಿಕರಣದ ಸಂದರ್ಭದಲ್ಲಿ ಇವೆಲ್ಲ ಸಾಮಾನ್ಯ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.