ADVERTISEMENT

ಮಾರುತಿ: ಹೊಸ ಸ್ವಿಫ್ಟ್‌ ಮಾರುಕಟ್ಟೆಗೆ

ಪಿಟಿಐ
Published 8 ಫೆಬ್ರುವರಿ 2018, 20:08 IST
Last Updated 8 ಫೆಬ್ರುವರಿ 2018, 20:08 IST
ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಕಲ್ಯಾಣಿ ಮೋಟರ್ಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ವಿಜೇತ ನಟ ಚಂದನ್ ಶೆಟ್ಟಿ ಅವರು ಹೊಸ ಸ್ವಿಫ್ಟ್ ಕಾರ್‌ ಬಿಡುಗಡೆ ಮಾಡಿದರು. ಕಲ್ಯಾಣಿ ಮೋಟರ್ಸ್‌ನ ಮಾರಾಟ ವ್ಯವಸ್ಥಾಪಕ ವಿನಯ್ ಭಾಗವತ್, ಸಹಾಯಕ ಪ್ರಧಾನ ವ್ಯವಸ್ಥಾಪಕ ನಟರಾಜ್ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ವೆಂಕಟ್ ಇದ್ದರು -- ----------        ಪ್ರಜಾವಾಣಿ ಚಿತ್ರ

ನವದೆಹಲಿ: ದೇಶದ ಅತಿದೊಡ್ಡ ಕಾರ್‌ ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ), ಗ್ರೇಟರ್‌ ನೊಯಿಡಾದಲ್ಲಿ ನಡೆಯುತ್ತಿರುವ ವಾಹನ ಮೇಳದಲ್ಲಿ ತನ್ನ ಹೊಸ ಸ್ವಿಫ್ಟ್‌ ಕಾರ್‌ ಪರಿಚಯಿಸಿದೆ.

‘ಭಾರತದ ಗ್ರಾಹಕರು ಬದಲಾಗುತ್ತಿದ್ದಾರೆ. ಅವರ ಬದಲಾಗುತ್ತಿರುವ ಅಗತ್ಯಗಳಿಗೆ ತಕ್ಕಂತೆ ಉತ್ಪನ್ನ, ತಂತ್ರಜ್ಞಾನ ಮತ್ತು ಕಾರ್‌ ಚಾಲನೆಯ ಅನುಭವದಲ್ಲಿ ಸಂಸ್ಥೆಯು ಹೊಸತನ ಅಳವಡಿಸಿದೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆನಿಚಿ ಆಯುಕವಾ ಹೇಳಿದ್ದಾರೆ.

ಇದು ಪೆಟ್ರೋಲ್‌ ಮತ್ತು ಡೀಸೆಲ್‌ ಚಾಲಿತ ಮಾದರಿಯಲ್ಲಿ ಲಭ್ಯ ಇರಲಿದೆ. ಆಟೊ ಗೇರ್‌ ಶಿಫ್ಟ್‌ ಸೌಲಭ್ಯ ಇದರಲ್ಲಿ ಇದೆ. ಡ್ಯುಯೆಲ್ ಏರ್‌ಬ್ಯಾಗ್‌ ಮತ್ತಿತರ ಸುರಕ್ಷತಾ ಸೌಲಭ್ಯ ಒಳಗೊಂಡಿದೆ.

ADVERTISEMENT

ಇದರ ಆರಂಭಿಕ ಕೊಡುಗೆ ಬೆಲೆ ₹ 4.99 ಲಕ್ಷದಿಂದ ₹ 8.29 ಲಕ್ಷ (ದೆಹಲಿ ಎಕ್ಸ್‌ಷೋರೂಂ) ಇರಲಿದೆ. ಜನವರಿಯಲ್ಲಿಯೇ ಈ ಹೊಸ ಕಾರ್ ಬುಕಿಂಗ್‌ ಆರಂಭಿಸಲಾಗಿದೆ.

ಹೊಸ ಸ್ವಿಫ್ಟ್‌ ಅಭಿವೃದ್ಧಿಪಡಿಸಲು ಸಂಸ್ಥೆ ₹ 800 ಕೋಟಿ ವೆಚ್ಚ ಮಾಡಿದೆ. ಪ್ರತಿ ತಿಂಗಳೂ ಸರಾಸರಿ 15 ಸಾವಿರ ಸ್ವಿಫ್ಟ್‌ ಮಾರಾಟವಾಗುತ್ತಿವೆ. ಹೊಸ ಸ್ವಿಫ್ಟ್‌ ಕಾರಣಕ್ಕೆ ಬೇಡಿಕೆ ಇನ್ನಷ್ಟು ಹೆಚ್ಚಲಿದೆ ಎಂದು ಸಂಸ್ಥೆ ನಿರೀಕ್ಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.