ADVERTISEMENT

ಎಸ್‌ಬಿಐ ನಷ್ಟ ₹ 1,887 ಕೋಟಿ

ಪಿಟಿಐ
Published 9 ಫೆಬ್ರುವರಿ 2018, 19:12 IST
Last Updated 9 ಫೆಬ್ರುವರಿ 2018, 19:12 IST
ಎಸ್‌ಬಿಐ ನಷ್ಟ ₹ 1,887 ಕೋಟಿ
ಎಸ್‌ಬಿಐ ನಷ್ಟ ₹ 1,887 ಕೋಟಿ   

ಮುಂಬೈ: ಭಾರತೀಯ ಸ್ಟೇಟ್‌ ಬ್ಯಾಂಕ್‌, ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ 1 2,887 ಕೋಟಿ ನಷ್ಟ ಅನುಭವಿಸಿದೆ.

2016-17ನೇ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹ 2,152 ಕೋಟಿ ನಿವ್ವಳ ಲಾಭ ಗಳಿಸಿತ್ತು.

ವಸೂಲಿಯಾಗದ ಸಾಲದ (ಎನ್‌ಪಿಎ) ಪ್ರಮಾಣ ಗರಿಷ್ಠ ಮಟ್ಟದಲ್ಲಿ ಇರುವುದು (ಶೇ 5.61) ಹಾಗೂ ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ನಷ್ಟ ಭರಿಸಲು ತೆಗೆದಿರಿಸುವ ಮೊತ್ತದಲ್ಲಿಯೂ ಭಾರಿ ಏರಿಕೆ ಕಂಡಿರುವುದರಿಂದ ನಷ್ಟ ಕಾಣುವಂತಾಗಿದೆ ಎಂದು ತಿಳಿಸಿದೆ.

ADVERTISEMENT

ಮೌಲ್ಯದ ಲೆಕ್ಕದಲ್ಲಿ ವಸೂಲಾಗದ ಸಾಲ ₹ 61,430  ಕೋಟಿಯಿಂದ ₹ 1.02 ಲಕ್ಷ ಕೋಟಿಗೆ ಭಾರಿ ಏರಿಕೆ ಕಂಡಿದೆ.  ತೆರಿಗೆ ರಹಿತ ವರಮಾನ ಶೇ 29.75 ರಷ್ಟು ಇಳಿಕೆ ಕಂಡಿದ್ದು, ₹ 11,507 ಕೋಟಿಗಳಿಂದ ₹ 8,084 ಕೋಟಿಗಳಿಗೆ ತಗ್ಗಿದೆ. ಶುಲ್ಕ ರಹಿತ ವರಮಾನ ಶೇ 18.38 ರಷ್ಟು ಕಡಿಮೆ ಆಗಿದ್ದು, ₹ 14,401 ಕೋಟಿಗಳಿಂದ ₹ 11,755 ಕೋಟಿಗೆ ಇಳಿಕೆ ಕಂಡಿದೆ. ಶುಲ್ಕದಿಂದ ಬಂದಿರುವ ವರಮಾನ ₹ 4,710 ಕೋಟಿಗಳಿಂದ ₹ 4,979 ಕೋಟಿಗೆ ಶೇ 5.71 ರಷ್ಟು ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.