ಬೆಂಗಳೂರು: ಪ್ಯಾನಾಸೋನಿಕ್ ಇಂಡಿಯಾ ಸಂಸ್ಥೆಯು ಆಕರ್ಷಕ ವಿನ್ಯಾಸದ ‘ಪಿ 100’ ಹೆಸರಿನ ಹೊಸ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ.
ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರುವ ಈ ಫೋನ್, 14 ಮೆಗಾಪಿಕ್ಸೆಲ್ ಸಾಮರ್ಥ್ಯದ ಹಿಂಬದಿ ಕ್ಯಾಮೆರಾ ಹೊಂದಿದೆ. ಇದರಲ್ಲಿರುವ ಮಲ್ಟಿ-ಮೋಡ್ ಆಯ್ಕೆಯು ಚಿತ್ರದ ಗುಣಮಟ್ಟ ಹೆಚ್ಚಿಸಲು ನೆರವಾಗುತ್ತದೆ. ಈ ಹೊಸ ಸ್ಮಾರ್ಟ್ಫೋನ್ ಡ್ಯೂರಾಸ್ಪೀಡ್ ತಂತ್ರಜ್ಞಾನ ಹೊಂದಿದೆ. ಇದರಿಂದ ಬಳಕೆ ಮಾಡದ ಆ್ಯಪ್ಗಳು ಬ್ಯಾಟರಿ ಮತ್ತು ಡೇಟಾ ಉಳಿತಾಯ ಮಾಡಲಿವೆ. ಇ–ಕಾಮರ್ಸ್ ತಾಣ ಫ್ಲಿಪ್ಕಾರ್ಟ್ನಲ್ಲಿ ಖರೀದಿಗೆ ಲಭ್ಯವಿದೆ. ಬೆಲೆ ₹ 5,299ರಿಂದ ಆರಂಭವಾಗುತ್ತದೆ.
‘ಸಂಸ್ಥೆಯು`ಗೋಲ್ಡ್ ಉತ್ಸವ್’ ಕೊಡುಗೆ ಬಿಡುಗಡೆ ಮಾಡಿದೆ. ಅದೃಷ್ಟಶಾಲಿ ಗ್ರಾಹಕರು ಈ ಫೋನ್ ಖರೀದಿಸುವಾಗ ವಿಶೇಷ ಉಡುಗೊರೆ ರೂಪದಲ್ಲಿ 10 ಗ್ರಾಂ ಚಿನ್ನ ಗೆಲ್ಲುವ ಅವಕಾಶವಿದೆ’ ಎಂದು ಸಂಸ್ಥೆಯ ವಹಿವಾಟಿನ ಮುಖ್ಯಸ್ಥ ಪಂಕಜ್ ರಾಣಾ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.