ADVERTISEMENT

55.64ಕ್ಕೆ ಬಂದ ರೂ - ಅಪಮೌಲ್ಯ ತಡೆಗೆ ಕ್ರಮ: ಆರ್‌ಬಿಐ

​ಪ್ರಜಾವಾಣಿ ವಾರ್ತೆ
Published 24 ಮೇ 2012, 19:30 IST
Last Updated 24 ಮೇ 2012, 19:30 IST

ಮುಂಬೈ(ಪಿಟಿಐ): ಪೆಟ್ರೋಲ್ ಬೆಲೆ ಏರಿಕೆಗೆ ಕಾರಣವಾಗಿದ್ದ ರೂಪಾಯಿ ಅಪಮೌಲ್ಯ ಕ್ರಿಯೆಗೆ ಗುರುವಾರ ಅಲ್ಪ ವಿರಾಮ ಸಿಕ್ಕಿತು. ಡಾಲರ್ ವಿರುದ್ಧ ರೂಪಾಯಿ ಬೆಲೆ ಗುರುವಾರ ರೂ55.64ಕ್ಕೆ ಬಂದು ವಿದೇಶಿ ವಿನಿಮಯ ಮಾರುಕಟ್ಟೆ ಮತ್ತು ಆಮದುದಾರರು ಸ್ವಲ್ಪ ನಿಟ್ಟುಸಿರು ಬಿಡುವಂತೆ ಮಾಡಿತು.

ಇದಕ್ಕೂ ಮುನ್ನ ಗರಿಷ್ಠ 56.38ರವರೆಗೂ ರೂಕುಸಿದಿತ್ತು. ಮಾರ್ಚ್ 1ರಿಂದ ಈವರೆಗೆ ರೂಪಾಯಿ ಒಟ್ಟು ಶೇ 13ರಷ್ಟು ಮೌಲ್ಯ ಕಳೆದುಕೊಂಡಿದೆ.

ಮಸ್ಸೂರಿ(ಪಿಟಿಐ): ರೂಪಾಯಿ ಮೌಲ್ಯ ತೀವ್ರವಾಗಿ ಕುಸಿಯುತ್ತಿರುವುದನ್ನು ತಡೆಯುವ ಭರವಸೆ ನೀಡುತ್ತಲೇ ಇರುವ ಭಾರತೀಯ ರಿಸರ್ವ್ ಬ್ಯಾಂಕ್, ಸದ್ಯದ ಪರಿಸ್ಥಿತಿಯನ್ನು ಗಂಭೀರವಾಗಿ ಅವಲೋಕಿ ಸುತ್ತಿರುವುದಾಗಿಯೂ, ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿಯೂ ಗುರುವಾರ ಹೇಳಿದೆ.

ಜತೆಗೆ ಚಾಲ್ತಿ ಖಾತೆಯಲ್ಲಿನ ಪರಿಸ್ಥಿತಿ ಸುಧಾರಣೆಗಾಗಿ ಕೆಲವು ರಚನಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಆರ್‌ಬಿಐ ಗವರ್ನರ್ ಡಿ.ಸುಬ್ಬರಾವ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.