ADVERTISEMENT

68 ಸಾವಿರ ಕಂಪನಿಗಳ ನೋಂದಣಿ

ಪಿಟಿಐ
Published 30 ಮಾರ್ಚ್ 2018, 19:30 IST
Last Updated 30 ಮಾರ್ಚ್ 2018, 19:30 IST

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಬಂದ ಎಂಟು ತಿಂಗಳ ಒಳಗೆ 68,299 ಕಂಪನಿಗಳು ನೋಂದಣಿ ಆಗಿವೆ ಎಂದು ಕಾರ್ಪೊರೇಟ್‌ ವ್ಯವಹಾರಗಳ ರಾಜ್ಯ ಸಚಿವ ಪಿ.ಪಿ. ಚೌಧರಿ ತಿಳಿಸಿದ್ದಾರೆ.

2016ರ ಜುಲೈನಿಂದ 2017ರ ಜುಲೈವರೆಗೆ 63,106 ಕಂಪನಿಗಳು ನೋಂದಣಿ ಆಗಿದ್ದವು. ಜಿಎಸ್‌ಟಿ ಜಾರಿಯ ಬಳಿಕ ನೋಂದಣಿ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದೆ ಎಂದು ಹೇಳಿದ್ದಾರೆ.

ಹಿಂದಿನ ವರ್ಷ ಒಟ್ಟು 17 ಲಕ್ಷ ಕಂಪನಿಗಳು ನೋಂದಣಿ ಮಾಡಿಸಿದ್ದು, ಅದರಲ್ಲಿ 7,270 ಕಂಪನಿಗಳು ಮಾತ್ರವೇ ಸಕ್ರಿಯವಾಗಿವೆ ಎಂದು ಅವರು ಪ್ರತ್ಯೇಕ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ADVERTISEMENT

ಹಣಕಾಸು ಮಾಹಿತಿ ಮತ್ತು ಲೆಕ್ಕಪತ್ರ ಸಲ್ಲಿಸದೇ ಇರುವ 780 ಕಂಪನಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ನೋಂದಣಿ ರದ್ದು ಮಾಡಿರುವ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರಕ್ಕೆ ಸೇರಿದ ಕಂಪನಿಗಳ ಸಂಖ್ಯೆ ಹೆಚ್ಚಿದೆ.(59,849). ನವ ದೆಹಲಿ (43,925), ತಮಿಳುನಾಡು (24,723), ಕರ್ನಾಟಕ (18,165) ನಂತರದ ಸ್ಥಾನದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.