ADVERTISEMENT

₹75 ಲಕ್ಷ ಮೇಲ್ಪಟ್ಟ ಗೃಹ ಸಾಲಕ್ಕೆ ಶೇ 8.6 ಬಡ್ಡಿ: ಎಸ್‌ಬಿಐ

ಏಜೆನ್ಸೀಸ್
Published 9 ಜೂನ್ 2017, 18:56 IST
Last Updated 9 ಜೂನ್ 2017, 18:56 IST
₹75 ಲಕ್ಷ ಮೇಲ್ಪಟ್ಟ ಗೃಹ ಸಾಲಕ್ಕೆ ಶೇ 8.6 ಬಡ್ಡಿ: ಎಸ್‌ಬಿಐ
₹75 ಲಕ್ಷ ಮೇಲ್ಪಟ್ಟ ಗೃಹ ಸಾಲಕ್ಕೆ ಶೇ 8.6 ಬಡ್ಡಿ: ಎಸ್‌ಬಿಐ   

ಮುಂಬೈ: ದೇಶದ ಅತಿದೊಡ್ಡ ಬ್ಯಾಂಕ್‌ ಆಗಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ), ರೂ 75 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಗೃಹ ಸಾಲಗಳ ಮೇಲಿನ ಬಡ್ಡಿ ದರಗಳನ್ನು ಶೇ 0.10 ರಷ್ಟು ಕಡಿಮೆ ಮಾಡಿದೆ.

ಗೃಹ ಸಾಲ ವಿತರಣೆಗೆ ಸಂಬಂಧಿಸಿದಂತೆ ರಿಸರ್ವ್‌ ಬ್ಯಾಂಕ್‌, ಕೆಲ ನಿಯಮಗಳನ್ನು ಸಡಿಲಿಸಿದ ಬೆನ್ನಲ್ಲೇ, ಎಸ್‌ಬಿಐ ಈ ನಿರ್ಧಾರ ಪ್ರಕಟಿಸಿದೆ.

ಉದ್ಯೋಗದಲ್ಲಿ ಇರುವ ಮಹಿಳೆಯರಿಗೆ ಶೇ 8.55 ಮತ್ತು ಇತರರಿಗೆ ಶೇ 8.60 ದರ ನಿಗದಿ ಮಾಡಲಾಗಿದೆ. ಹೊಸ ಬಡ್ಡಿ ದರಗಳು ಇದೇ 15 ರಿಂದ ಜಾರಿಗೆ ಬರಲಿವೆ.

ADVERTISEMENT

ಗೃಹ ಸಾಲಕ್ಕೆ ತೆಗೆದು ಇರಿಸುವ ಬಂಡವಾಳದ ಮೊತ್ತವನ್ನು ಆರ್‌ಬಿಐ ತಗ್ಗಿಸಿದೆ. ₹ 75 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಸಾಲಕ್ಕೆ ಪ್ರತ್ಯೇಕವಾಗಿ ತೆಗೆದು ಇರಿಸುವ ಮೊತ್ತದ ಪ್ರಮಾಣವನ್ನು ಸದ್ಯದ ಶೇ 75 ರಿಂದ ಶೇ 50ಕ್ಕೆ ಮತ್ತು ₹ 30 ಲಕ್ಷದಿಂದ ₹ 75 ಲಕ್ಷದವರೆಗಿನ ಸಾಲಕ್ಕೆ ಶೇ 35ಕ್ಕೆ ನಿಗದಿಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.