ADVERTISEMENT

₹ 84,357 ಕೋಟಿ ಐಪಿಒ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 19:30 IST
Last Updated 9 ಏಪ್ರಿಲ್ 2018, 19:30 IST
₹ 84,357 ಕೋಟಿ ಐಪಿಒ ಸಂಗ್ರಹ
₹ 84,357 ಕೋಟಿ ಐಪಿಒ ಸಂಗ್ರಹ   

ನವದೆಹಲಿ: ದೇಶದ ಕಂಪನಿಗಳು 2017–18ನೇ ಆರ್ಥಿಕ ವರ್ಷದಲ್ಲಿ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ₹ 84,357 ಕೋಟಿ ಸಂಗ್ರಹಿಸಿವೆ.

2016–17ನೇ ಆರ್ಥಿಕ ವರ್ಷದಲ್ಲಿ ಸಂಗ್ರಹ ಆಗಿದ್ದ ಮೊತ್ತಕ್ಕೆ (₹29,050 ಕೋಟಿ) ಹೋಲಿಕೆ ಮಾಡಿದರೆ ಬಂಡವಾಳ ಸಂಗ್ರಹದ ಮೊತ್ತ ಮೂರು ಪಟ್ಟು ಹೆಚ್ಚಾಗಿದೆ ಎಂದು ಪ್ರೈಮ್ ಡಾಟಾಬೇಸ್‌ ಸಂಸ್ಥೆ ಮಾಹಿತಿ ನೀಡಿದೆ.

2017–18ನೇ ಆರ್ಥಿಕ ವರ್ಷ ಐಪಿಒ ಮಾರುಕಟ್ಟೆಗೆ ಫಲಪ್ರಧವಾಗಿದೆ. ಈ ಹಿಂದೆ 2007–08ರಲ್ಲಿ ₹ 41,323 ಕೋಟಿಗಳಷ್ಟು ಗರಿಷ್ಠ ಮೊತ್ತ ಸಂಗ್ರಹವಾಗಿತ್ತು ಎಂದು ಪ್ರೈಮ್‌ ಡಾಟಾಬೇಸ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರಣವ್‌ ಹಲ್ದಿಯಾ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.