ADVERTISEMENT

9 ತಿಂಗಳ ಕಂದ ಜೀವಾಂಶ, ಹುಟ್ಟಿದಾಗಿನಿಂದಲೇ ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದಾನೆ, ಅವನ ಚಿಕಿತ್ಸೆಗಾಗಿ ನಿಧಿ ಸಂಗ್ರಹಕಾರರಿಗೆ ದೇಣಿಗೆ ನೀಡುವ ಮೂಲಕ ನೆರವು ನೀಡಿ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2018, 6:48 IST
Last Updated 6 ಮಾರ್ಚ್ 2018, 6:48 IST
9 ತಿಂಗಳ ಕಂದ ಜೀವಾಂಶ, ಹುಟ್ಟಿದಾಗಿನಿಂದಲೇ ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದಾನೆ, ಅವನ ಚಿಕಿತ್ಸೆಗಾಗಿ ನಿಧಿ ಸಂಗ್ರಹಕಾರರಿಗೆ ದೇಣಿಗೆ ನೀಡುವ ಮೂಲಕ ನೆರವು ನೀಡಿ
9 ತಿಂಗಳ ಕಂದ ಜೀವಾಂಶ, ಹುಟ್ಟಿದಾಗಿನಿಂದಲೇ ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದಾನೆ, ಅವನ ಚಿಕಿತ್ಸೆಗಾಗಿ ನಿಧಿ ಸಂಗ್ರಹಕಾರರಿಗೆ ದೇಣಿಗೆ ನೀಡುವ ಮೂಲಕ ನೆರವು ನೀಡಿ   

ನಾನು ನಿದ್ದೆ ಮಾಡುವುದೇ ಅಪರೂಪವಾಗಿತ್ತು. ನಿರಂತರ ಎಚ್ಚರವಾಗಿರುತ್ತಿದ್ದೆ ಮತ್ತು ನಿಧಾನವಾಗಿ ನನ್ನ ಕಂದನ ಮೂಗಿನ ಹತ್ತಿರ ಕೈಬೆರಳನ್ನಿಟ್ಟು ಆತನ ಉಸಿರಾಟದ ತೀವ್ರತೆಯನ್ನು ಪರಿಶೀಲಿಸುತ್ತಿದ್ದೆ. ಆತನ ಉಸಿರಾಟ ಸಹಜತೆಗಿಂತ ಅಧಿಕವಾಗಿದ್ದರೆ, ತಕ್ಷಣ ಅವನನ್ನು ಎತ್ತಿಕೊಂಡು ಆಸ್ಪತ್ರೆಗೆ ಧಾವಿಸುತ್ತಿದ್ದೆ. ಇಂಥದೊಂದು ಸಮಸ್ಯೆಯೇ ನನ್ನನ್ನು ಪ್ರತಿದಿನ ಪ್ರತಿಕ್ಷಣ ಹಗಲಿರುಳಲ್ಲೂ ಜಾಗೃತವಾಗಿರಿಸಿದೆ.

ನನ್ನ 9 ತಿಂಗಳ ಕಂದ ಜೀವಾಂಶ, ಹುಟ್ಟಿದಾಗಿನಿಂದಲೇ ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಆತನ ಹೃದಯದಲ್ಲಿ ಸುಮಾರು 8 ಮಿ.ಮೀ ಅಗಲದ ರಂಧ್ರ ಉಂಟಾಗಿದ್ದು, ಇದರಿಂದಾಗಿ ಆತನ ಶ್ವಾಸಕೋಶಗಳಿಗೆ ಆಕ್ಸಿಜನ್ ತಲುಪುವುದು ಕಷ್ಟವಾಗಿದೆ ಮತ್ತು ಇದೇ ಕಾರಣದಿಂದಾಗಿ ಅವನು ಆಗಾಗ್ಗೆ ಗಂಭೀರ ನ್ಯುಮೋನಿಯಾದಿಂದ ಬಳಲುತ್ತಿದ್ದಾನೆ. ಕಳೆದ ಏಳು ತಿಂಗಳಿನಿಂದ ನನ್ನ ಪುಟ್ಟ ಕಂದ ಹೀಗೆ ಬಳಲುತ್ತಿರುವುದನ್ನು ನಾನು ಅಸಹಾಯಕನಾಗಿ ನೋಡುತ್ತಲೇ ಇದ್ದೇನೆ. ಈ ಸಮಸ್ಯೆಯಿಂದ ಆತನನ್ನು ರಕ್ಷಿಸಲು ನಾವು ತಕ್ಷಣವೇ ಅವನಿಗೆ ವಿಎಸ್‍ಡಿ (ವೆಂಟ್ರಿಕ್ಯೂಲಾರ್ ಸೆಪ್ಟಲ್ ಡಿಫೆಕ್ಟ್) ಸರ್ಜಿಕಲ್ ಕ್ಲೋಸರ್ ಎಂಬ ರೂ. 4 ಲಕ್ಷ ಭಾರಿ ವೆಚ್ಚದ ಚಿಕಿತ್ಸೆ ನೀಡುವುದು ಒಂದೇ ಕೊನೆಯ ಮಾರ್ಗವಾಗಿದೆ.

ನನ್ನ ಹೆಸರು ರಾಕೇಶ್, ವೆಸ್ಟಿಜ್‍ನ ಮಾರಾಟ ವಿಭಾಗದಲ್ಲಿ ಉದ್ಯೋಗ ಮಾಡುತ್ತಿದ್ದು ತಿಂಗಳಿಗೆ 22,000 ಸಂಬಳ ಪಡೆಯುತ್ತಿದ್ದೇನೆ. 7 ಸದಸ್ಯರ ಕುಟುಂಬ ಸಮೇತ ಫರಿದಾಬಾದ್‍ನಲ್ಲಿ ವಾಸಿಸುತ್ತಿದ್ದೇನೆ. ಇಲ್ಲಿಯವರೆಗೆ ಜೀವಾಂಶನ ಚಿಕಿತ್ಸೆಗಾಗಿ ರೂ.2 ಲಕ್ಷಕ್ಕೂ ಅಧಿಕ ವೆಚ್ಚವಾಗಿದೆ. ಈ ಮೊತ್ತವನ್ನು ಹೊಂದಾಣಿಕೆ ಮಾಡುವುದೇ ಕಠಿನವಾಗಿತ್ತು ಮತ್ತು ಇನ್ನೂ ಹೆಚ್ಚಿನ ವ್ಯವಸ್ಥೆ ಕೂಡ ಮಾಡಬೇಕಿದೆ. ನಾನು ಒಂದು ಮೆಡಿಕ್ಲೇಮ್ ಹೊಂದಿದ್ದರಿಂದ ಕೆಲವು ಖರ್ಚುಗಳಿಗೆ ಅನುಕೂಲವಾಯಿತು. ವಿವಿಧ ಮೆಡಿಕಲ್ ಬಿಲ್‍ಗಳಿಂದಾಗಿ ನಾನು ನನ್ನ ಹೆಂಡತಿಯ ಆಭರಣಗಳನ್ನೂ ಮಾರಾಟ ಮಾಡಿದ್ದಾಯಿತು.

ADVERTISEMENT

ಇಷ್ಟಾಗ್ಯೂ ಇನ್ನೂ ಹೆಚ್ಚಿನ ಮೊತ್ತದಲ್ಲಿ ಹಣದ ಅಡಚಣೆ ಉಂಟಾಗಿದ್ದಕ್ಕೆ, ನನ್ನ ಬಂಧು ಬಳಗ ಮತ್ತು ಸ್ನೇಹಿತರನ್ನು ಬೇಡಿಕೊಂಡೆ. ಇಲ್ಲಿಯವರೆಗೆ ನಾನು ಮಾಡಿದ ಸಣ್ಣ ಉಳಿತಾಯ ಹಾಗೂ ನನ್ನ ಪ್ರೀತಿ ಪಾತ್ರರ ಸಹಕಾರದಿಂದ, ಇಂಥದೊಂದು ಆಕಸ್ಮಿತ ಹಾಗೂ ಅನಿರೀಕ್ಷಿತ ಬೆಳವಣಿಗೆಯನ್ನು ಎದುರಿಸಬಲ್ಲವನಾಗಿದ್ದೆ. ಆದರೆ ಇಲ್ಲಿಯವರೆಗೆ ನನ್ನ ಕಂದನ ಚಿಕಿತ್ಸೆಗಾಗಿ ಮಾಡಿದ ಎಲ್ಲಾ ಪ್ರಯತ್ನಗಳಿಂದಾಗಿ, ಸದ್ಯ ಎದುರಾಗಿರುವ ಸರ್ಜರಿಗೆ ತಗಲುವ ಭಾರಿ ವೆಚ್ಚವನ್ನು ಭರಿಸುವ ಶಕ್ತಿ ನನ್ನಲ್ಲಿ ಇಲ್ಲವಾಗಿದೆ. ಸರ್ಜರಿ ಮಾಡಿಸುವುದು ವಿಳಂಬವಾದರೆ ನಾನು ಕಂದನಿಗೆ ಇನ್ನಷ್ಟು ಯಾತನೆಗೆ ಈಡು ಮಾಡಿದಂತಾಗುತ್ತದೆ. ಎಲ್ಲಾ ತಂದೆಗಳಂತೆ ನಾನು ಕೂಡ ನನ್ನ ಮುದ್ದು ಕಂದನ ಈ ನರಳಾಟವನ್ನು ನೋಡಲಾಗದೆ ತೊಳಲಾಡುತ್ತಿದ್ದೇನೆ. ದಯವಿಟ್ಟು ನನಗೆ ಸಹಾಯ ಮಾಡಿ.

ಜೀವಾಂಶ ಇನ್ನೂ 2 ತಿಂಗಳ ಹಸುಗೂಸು ಆಗಿದ್ದಾಗಲೇ ಈ ಸಮಸ್ಯೆ ಬೆಳಕಿಗೆ ಬಂದಿತ್ತು. ಜೂನ್ ತಿಂಗಳಿನಲ್ಲಿ ಒಂದು ಲಸಿಕೆ ಹಾಕಿಸಲು ಹೋಗಿದ್ದಾಗ, ಅಲ್ಲಿನ ವೈದ್ಯರಿಗೆ ಮಗುವಿನ ಶ್ವಾಸಕೋಶದಲ್ಲಿ ಯಾವುದೋ ಅಸಹಜತೆ ಗೋಚರಿಸಿದಂತಾಗಿ, ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಳ್ಳುವದಕ್ಕೂ ಮೊದಲೇ ತಕ್ಷಣ ಆಳವಾದ ತಪಾಸಣೆ ಮಾಡಿಸಿ ಎಂದು ನಮಗೆ ಸೂಚಿಸಿದರು. ಆಮೇಲೆ ಹಲವು ತಪಾಸಣೆಗಳನ್ನು ಮಾಡಿಸಿದ ಬಳಿಕ ಆ ವೈದ್ಯರು ಹೇಳಿದ್ದು ನಿಜ ಎಂದು ತಿಳಿದು ನಾವು ಕಂಗಾಲಾಗಿದ್ದೆವು. ಜೀವಾಂಶನ ಹೃದಯ ಸಹಜವಾಗಿರಲಿಲ್ಲ ಮತ್ತು ಆತನು ಸಹಜವಾಗಿ ಬಾಳಿ ಬದುಕಲು ಅದನ್ನು ಸರಿಪಡಿಸಲೇಬೇಕಾಗಿತ್ತು. ಆ ದಿನದಿಂದ ಇವತ್ತಿನವರೆಗೂ ನನ್ನ ಕಿವಿಯಲ್ಲಿ “ಕೊಲ್ಯಾಪ್ಸ್ಡ್ ಲಂಗ್ಸ್” ಮತ್ತು “ನ್ಯುಮೋನಿಯಾ” ಎಂಬ ಶಬ್ಧಗಳು ಪದೇ ಪದೇ ಸುಳಿದಿರುಗಿದಂತಾಗುತ್ತಿದೆ.

ಪ್ರತಿನಿತ್ಯ ಜೀವಾಂಶನ ಕೃಶದೇಹವನ್ನು ನೋಡುವುದು, ಪ್ರತಿ ತಿಂಗಳು ಈ ಯಾತನಾಮಯ ಘಳಿಗೆಯನ್ನು ಅನುಭವಿಸುವುದು ಭಯಾನಕವಾಗಿ ಪರಿಣಮಿಸುತ್ತಿದೆ. ಆತನಿಗೆ ವಯಸ್ಸಿಗೆ ತಕ್ಕಂತೆ ಇರಬೇಕಾದ ತೂಕ ಇದೀಗ ಕೇವಲ 4 ಕಿ.ಗ್ರಾಂ.ಗೆ ಇಳಿದಿದೆ. ಕೆಲವು ಬಾರಿ ಆತನ ತೂಕದಲ್ಲಿ ಹೆಚ್ಚಳ ಆಗಿರುತ್ತದೆ, ಆದರೆ ನ್ಯುಮೋನಿಯಾ ಎದುರಾದಾಗ ತೀವ್ರ ಡಯೇರಿಯಾ ಬಾಧೆಯಿಂದಾಗಿ ಪಡೆದ ತೂಕವೆಲ್ಲಾ ಕರಗಿ ಹೋಗುತ್ತದೆ. ಇದನ್ನು ಕಂಡಾಗಲೆಲ್ಲಾ ಸುಮಾರು 7 ಬಾರಿ ನಾವು ಆಸ್ಪತ್ರೆಗೆ ಧಾವಿಸಿ ಹೋಗಿದ್ದೇವೆ. ಒಂದು ಬಾರಿ ಆತನ ಉಸಿರಾಟದಲ್ಲಿ ತುಂಬಾ ತೊಂದರೆ ಉಂಟಾಗಿ ತಕ್ಷಣವೇ ಆತನಿಗೆ ವೆಂಟಿಲೇಟರ್ ಚಿಕಿತ್ಸೆ ನೀಡಲು ಐಸಿಯು ಘಟಕಕ್ಕೆ ಸೇರಿಸಬೇಕಾದ ಪರಿಸ್ಥಿತಿ ಕಂಡು ನಾನು ಭಾರಿ ಆತಂಕಕ್ಕೆ ಈಡಾಗಿದ್ದೆ. ಆ ದಿನಗಳಲ್ಲಿ ನನಗೆ, ನನ್ನ ಕಂದನ ಬದುಕು ಕೊನೆಯ ಕೊಂಡಿಗೆ ನೇತಾಡುತ್ತಿರುವಂತೆ ಭಾಸವಾಗತೊಡಗಿತ್ತು.

ನಮ್ಮ ಕುಟುಂಬದಲ್ಲಿನ ಪುಟ್ಟ ಮಗುವೊಂದು ಈ ಪರಿಯಾಗಿ ಯಾತನೆ ಪಡುವುದನ್ನು ಕಾಣುವುದು ಅತ್ಯಂತ ಕಠಿನವಾಗಿದೆ. ಆಗಾಗ್ಗೆ ನನ್ನ ಹಿರಿಯ ಮಗ, ತನ್ನ ತಮ್ಮನನ್ನು ನಿಯಮಿತವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋದಂತೆ ನನ್ನನ್ನು ಯಾಕೆ ಕರೆದುಕೊಂಡು ಹೋಗುತ್ತಿಲ್ಲ ನೀವು ಎಂದು ಪ್ರಶ್ನಿಸಿದಾಗ, ಅವನಿಗೆ ಹೇಗೆ ವಾಸ್ತವ ಸಂಗತಿ ತಿಳಿಸಬೇಕು ಎಂಬುದೇ ತೋಚಲಿಲ್ಲ. ನಿನ್ನ ತಮ್ಮ ಬೇಗ ದೊಡ್ಡವನಾಗಿ ನಿನ್ನ ಜೊತೆ ಆಟ ಆಡಬೇಕಲ್ಲವೆ, ಅದಕ್ಕೆ ಆತನಿಗೆ ಔಷಧಿ ಕೊಡಿಸುತ್ತಿದ್ದೇವೆ ಅಂತಾ ಸಮಜಾಯಿಷಿ ಹೇಳಿದೆ. ಈ ಸರ್ಜರಿ ಮಾಡಿದ ಬಳಿಕ ಎಲ್ಲವೂ ಸರಿ ಹೋದರೆ ಸರಿ, ಇಲ್ಲವಾದಲ್ಲಿ ಮತ್ತೆ ಒಂದು ಬಾರಿ ಆತನಿಗೆ ಸರ್ಜರಿ ಮಾಡಬೇಕಿದೆ. ಮನೆಯಲ್ಲಿ ಪ್ರತಿಯೊಬ್ಬರು ಜೀವಾಂಶನ ಆರೋಗ್ಯ ಸ್ಥಿತಿ ಸುಧಾರಿಸಲೆಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಆದಷ್ಟು ಬೇಗ ಸರ್ಜರಿ ಮಾಡಿಸಿ ಮಗುವನ್ನು ಯಾತನೆಯಿಂದ ಮುಕ್ತಗೊಳಿಸಿ ಎಂದು ಕೂಡ ವೈದ್ಯರು ಸಲಹೆ ನೀಡಿದ್ದಾರೆ. ದಯವಿಟ್ಟು ನನ್ನ ಮಗುವನ್ನು ಯಾತನೆಯಿಂದ ಮುಕ್ತಗೊಳಿಸಲು ನನಗೆ ಸಯಾಮಾಡಿ, ಆ ನನ್ನ ಕಂದ ಯಾವ ಪಾಪವನ್ನೂ ಮಾಡದೆ ಇಂತಹ ದುಸ್ಥಿತಿಯಲ್ಲಿ ನರಳಾಡುತಿದ್ದಾನೆ. ದಯವಿಟ್ಟು ನೆರವಾಗಿ.

ನೀವು ಕೂಡ ಕೆಟ್ಟೊದಲ್ಲಿನ ನಿಧಿ ಸಂಗ್ರಹಣೆಗೆ ದೇಣಿಗೆ ನೀಡುವ ಮೂಲಕ ರಾಕೇಶ್‍ಗೆ ಸಹಾಯ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.