ADVERTISEMENT

ಬಜೆಟ್‌ ಮಂಡನೆಗೂ ಮುನ್ನ ಸೆನ್ಸೆಕ್ಸ್‌ ಜಿಗಿತ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2020, 5:27 IST
Last Updated 1 ಫೆಬ್ರುವರಿ 2020, 5:27 IST
ಷೇರುಪೇಟೆ
ಷೇರುಪೇಟೆ   

ಬೆಂಗಳೂರು: ಬಜೆಟ್‌ ಮಂಡನೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸಜ್ಜಾಗುತ್ತಿದ್ದಂತೆ ಷೇರುಪೇಟೆಗಳಲ್ಲಿ ಖರೀದಿ ಉತ್ಸಾಹ ಕಂಡು ಬಂದಿದ್ದು, ಶನಿವಾರದ ವಿಶೇಷ ವಹಿವಾಟು ಸಕಾರಾತ್ಮಕವಾಗಿ ಕಂಡು ಬಂದಿದೆ.ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನ (ಎಫ್‌ಎಂಸಿಜಿ) ಕಂಪನಿ ಷೇರುಗಳು ಏರಿಕೆ ದಾಖಲಿಸಿವೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 101.9 ಅಂಶ ಹೆಚ್ಚಳ ಕಂಡು40,824 ಅಂಶ ಮುಟ್ಟಿದೆ. ಆದರೆ, ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 12,000 ಅಂಶಗಳ ಗಡಿಯಿಂದ ಕುಸಿದಿದ್ದು,11,971

ಬಜೆಟ್‌ ಸಂಬಂಧಿತ ಸುದ್ದಿಗಳಿಗೆ:www.prajavani.net/budget-2020

ADVERTISEMENT

ಐಟಿಸಿ ಮತ್ತು ಹಿಂದುಸ್ತಾನ್‌ ಯುನಿಲಿವರ್‌ ಷೇರುಗಳು ಏರಿಕೆ ಕಂಡಿವೆ. ಐಟಿಸಿ ಕಳೆದ ತ್ರೈಮಾಸಿಕದಲ್ಲಿ ಶೇ 29ರಷ್ಟು ಲಾಭಾಂಶ ಹೆಚ್ಚಿಸಿಕೊಂಡಿದ್ದು, ಒಟ್ಟು ₹ 4,141.93 ಕೋಟಿ ಲಾಭ ಗಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.