ADVERTISEMENT

ಬಜೆಟ್‌ 2020 | ಸ್ವಚ್ಚ ಭಾರತಕ್ಕೆ ₹ 12,294 ಕೋಟಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2020, 19:45 IST
Last Updated 1 ಫೆಬ್ರುವರಿ 2020, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ನವದೆಹಲಿ: ‘ಸ್ವಚ್ಚ ಭಾರತ’ ಬಜೆಟ್‌ನಲ್ಲಿ ₹ 12,294 ಕೋಟಿ ಅನುದಾನ ನೀಡಲಾಗಿದೆ. ಇದರಲ್ಲಿ ನಗರ ಪ್ರದೇಶಗಳಿಗೆ ₹ 2,300 ಕೋಟಿ ಮತ್ತು ಗ್ರಾಮೀಣ ಭಾಗಕ್ಕೆ ₹ 9,994 ಕೋಟಿ ಹಂಚಲಾಗಿದೆ.

ಕಳೆದ ವರ್ಷ ₹ 12,644 ಕೋಟಿ ಅನುದಾನ ಮೀಸಲಿಡಲಾಗಿತ್ತು. ಈ ಬಾರಿ ನಗರ ಪ್ರದೇಶಗಳಿಗೆ ಹಂಚಲಾದ ಅನುದಾನದಲ್ಲಿ ₹ 350 ಕೋಟಿ ಕಡಿತಗೊಳಿಸಲಾಗಿದೆ.

ಗ್ರಾಮೀಣ ಭಾಗದ ಸ್ವಚ್ಚತೆಯೆಡೆಗೆ ಕೇಂದ್ರ ಹೆಚ್ಚು ಗಮನ ಹರಿಸಿದೆ. ‘ಬಯಲು ಶೌಚ ಮುಕ್ತ ಭಾರತ ನಿರ್ಮಾಣ ಮತ್ತು ದ್ರವ ತ್ಯಾಜ್ಯ ವಿಲೇವಾರಿಯನ್ನು ಶೇ 100 ಸಾಧಿಸಲು ಸರ್ಕಾರ ಬದ್ಧವಾಗಿದೆ. ಘನ ತ್ಯಾಜ್ಯ ನಿರ್ವಹಣೆ ಮತ್ತು ತ್ಯಾಜ್ಯ ನೀರು ಮರು ಬಳಕೆ ಕಾರ್ಯಕ್ರಮಕ್ಕೆ ಉತ್ತೇಜನ ನೀಡಲಾಗುವುದು’ ಎಂದು ನಿರ್ಮಲಾ ಹೇಳಿದ್ದಾರೆ.

ADVERTISEMENT

5,66,248 ಗ್ರಾಮಗಳನ್ನು ಬಯಲು ಶೌಚ ಮುಕ್ತ ಗ್ರಾಮಗಳೆಂದು ಕೇಂದ್ರ ಈ ಹಿಂದೆ ಘೋಷಿಸಿತ್ತು. ದೇಶದ ಒಟ್ಟು ಗ್ರಾಮಗಳಲ್ಲಿ ಶೇ 94.27 ಗ್ರಾಮಗಳು ಈ ಶ್ರೇಯಕ್ಕೆ ಪಾತ್ರವಾಗಿದ್ದವು. ಪ್ರಸಕ್ತ ಸಾಲಿನಲ್ಲಿ ಬಯಲು ಶೌಚ ಮುಕ್ತ ಭಾರತ ಗುರಿಯನ್ನು ಈಡೇರಿಸಲಾಗುವುದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.