ನವದೆಹಲಿ: ಏಳನೇ ಬಾರಿಗೆ ಬಜೆಟ್ ಮಂಡಿಸುತ್ತಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಹಿ–ಖಾತಾ(ಕೆಂಪು ವಸ್ತ್ರದಲ್ಲಿ ಸುತ್ತಿದ ದಾಖಲೆ) ಹಿಡಿದು ಹಣಕಾಸು ಸಚಿವಾಲಯದಿಂದ ಸಂಸತ್ ಭವನದತ್ತ ತೆರಳಿದ್ದಾರೆ.
2019ರಲ್ಲಿ ಮೊದಲ ಬಾರಿಗೆ ಬಜೆಟ್ ಮಂಡಿಸಿದ್ದ ಸೀತಾರಾಮನ್, ಚರ್ಮದ ಸೂಟ್‌ಕೇಸ್ ಬದಲು ಕೆಂಪು ವಸ್ತ್ರದಲ್ಲಿ ಬಜೆಟ್ ದಾಖಲೆ ತರುವ ಮೂಲಕ ಹಲವು ವರ್ಷಗಳ ಶಿಷ್ಟಾಚಾರಕ್ಕೆ ಕೊನೆ ಹಾಡಿದ್ದರು.
ಬಿಳಿ ಬಣ್ಣದ ಸೀರೆಯಲ್ಲಿ ನಿರ್ಮಲಾ ಸೀತಾರಾಮನ್
ಕಂದು ನೇರಳೆ ಬಣ್ಣದ ಅಂಚು ಹೊಂದಿರುವ ಬಿಳಿ ಸೀರೆ ಉಟ್ಟು ಬಂದಿರುವ ನಿರ್ಮಲಾ ಸೀತಾರಾಮನ್ ಅವರು ಸಂಸತ್ ಭವನದತ್ತ ತೆರಳಿದ್ದಾರೆ. ತಮ್ಮ ಐದನೇ ಬಜೆಟ್ ಮಂಡನೆ ವೇಳೆ ಧಾರವಾಡದ ಜಿಲ್ಲೆಯ ನವಲಗುಂದದ ಕಸೂತಿ ಕಲೆ ಇರುವ ಸೀರೆ ಉಟ್ಟಿದ್ದರು.
2019ರ ಬಜೆಟ್ ಮಂಡನೆ ವೇಳೆ ಗೋಲ್ಡನ್ ಬಾರ್ಡರ್ ಹೊಂದಿರುವ ಗುಲಾಬಿ ಬಣ್ಣದ ಮಂಗಳಗಿರಿ ಸೀರೆಯಟ್ಟು ಮಿಂಚಿದ್ದರು. 2020ರಲ್ಲಿ ಹಳದಿ ಹಾಗೂ ನೀಲಿ ಮಿಶ್ರಿತ ರೇಷ್ಮೆ ಸೀರೆಯಲ್ಲಿ ಕಾಣಿಸಿಕೊಂಡಿದ್ದರು. 2021ರಲ್ಲಿ ಕೆಂಪು ಮತ್ತು ಬಿಳಿ ಬಣ್ಣದ ಪೋಚಂಪಲ್ಲಿ ಸೀರೆಯಲ್ಲಿ ಮತ್ತು 2022ರಲ್ಲಿ ಕಂದು ಬಣ್ಣದ ಕೈಮಗ್ಗ ಸೀರೆ ಧರಿಸಿದ್ದರು. 2023ರ ಮಧ್ಯಂತರ ಬಜೆಟ್ ವೇಳೆ ನೀಲಿ ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.