ನವದೆಹಲಿ: ವಿವಿಧ ಯೋಜನೆಗಳ ಸಬ್ಸಿಡಿಗೆ ₹ 4.5 ಲಕ್ಷ ಕೋಟಿ ಸಬ್ಸಿಡಿ ಘೋಷಿಸಲಾಗಿದೆ. ಒಟ್ಟು ಸ್ವೀಕೃತಿಯಲ್ಲಿ ಶೇ 6ರಷ್ಟು ಮೊತ್ತ ವಿವಿಧ ಸಬ್ಸಿಡಿಗಳಿಗೆ ವೆಚ್ಚವಾಗಲಿದೆ. ಇದು ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ 1ರಷ್ಟು ಕಡಿಮೆ.
ಆಹಾರ, ರಸಗೊಬ್ಬರಗಳು ಹಾಗೂ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಗೆ ಸಂಬಂಧಿಸಿದ ಯೋಜನೆಗಳಡಿ ನೀಡಲಾಗುವ ಸಬ್ಸಿಡಿಗಾಗಿ ಒಟ್ಟು ₹ 4.5 ಲಕ್ಷ ಕೋಟಿ ಹಂಚಿಕೆ ಮಾಡಲಾಗಿದೆ.
ಆಹಾರಕ್ಕೆ ಸಂಬಂಧಿಸಿದ ಸಬ್ಸಿಡಿಗಾಗಿ ₹ 2 ಲಕ್ಷ ಕೋಟಿ ತೆಗೆದಿರಿಸಲಾಗಿದೆ. ಇದು, ಪ್ರಸಕ್ತ ಹಣಕಾಸು ವರ್ಷದ ಪರಿಷ್ಕೃತ ಅಂದಾಜಿಗಿಂತಲೂ ಅಧಿಕವಾಗಿದೆ.
ಒಬಿಸಿ ಹಾಗೂ ಇಬಿಸಿ ಅಭ್ಯರ್ಥಿಗಳು ವಿದೇಶಗಳಲ್ಲಿ ಉನ್ನತ ಶಿಕ್ಷಣ ಕೈಗೊಳ್ಳಲು ಪಡೆಯುವ ಸಾಲದ ಬಡ್ಡಿಗೆ ಸಂಬಂಧಿಸಿದ ಸಬ್ಸಿಡಿಗಾಗಿ ಬಜೆಟ್‌ನಲ್ಲಿ ₹60 ಕೋಟಿ ತೆಗೆದಿರಿಸಲಾಗಿದೆ.
ಸ್ವಸಹಾಯ ಗುಂಪುಗಳು ಹಾಗೂ ಗ್ರಾಮೀಣ ಭಾಗದ ಜನರು ಸಾಲ ಪಡೆಯುವುದಕ್ಕೆ ಅನುಕೂಲವಾಗಲು ಸಾರ್ವಜನಿಕ ವಲಯದ ಬ್ಯಾಂಕುಗಳು ‘ಗ್ರಾಮೀಣ ಕ್ರೆಡಿಟ್ ಸ್ಕೋರ್’ಗೆ ಸಂಬಂಧಿಸಿ ಚೌಕಟ್ಟು ರೂಪಿಸಲಿವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.