ADVERTISEMENT

Budget Session 2021 Live | ಆರ್ಥಿಕ ಸಮೀಕ್ಷೆ: 2021-22ರಲ್ಲಿ ದೇಶದ ಆರ್ಥಿಕ ಬೆಳವಣಿಗೆ ದರ ಅಂದಾಜು ಶೇ 11

ಫೆಬ್ರುವರಿ 1ರಂದು ಕೇಂದ್ರ ಬಜೆಟ್‌ ಮಂಡನೆಯಾಗಲಿದ್ದು, ಬಜೆಟ್ ಅಧಿವೇಶನ ಇಂದು (ಶುಕ್ರವಾರ) ಆರಂಭಗೊಂಡಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್, ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಸಂಸತ್‌ನ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ್ದಾರೆ. ರಾಜ್ಯಸಭೆಯು 3 ಗಂಟೆಗೆ ಪುನರಾರಂಭಗೊಂಡಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ಸಮೀಕ್ಷೆ ಮಂಡನೆ ಮಾಡುತ್ತಿದ್ದಾರೆ. ಬಜೆಟ್ ಅಧಿವೇಶನದ ಆರಂಭದ ದಿನದ ಕ್ಷಣಕ್ಷಣದ ಅಪ್‌ಡೇಟ್ಸ್ ಇಲ್ಲಿ ಲಭ್ಯ.

​ಪ್ರಜಾವಾಣಿ ವಾರ್ತೆ
Published 29 ಜನವರಿ 2021, 11:12 IST
Last Updated 29 ಜನವರಿ 2021, 11:12 IST

'ಲಾಕ್‌ಡೌನ್‌ನಿಂದ ಜೀವ–ಜೀವನ ಉಳಿದಿದೆ'

ಲಾಕ್‌ಡೌನ್‌ ಹೊರತಾಗಿಯೂ ಕೋವಿಡ್‌–19 ಸಾಂಕ್ರಾಮಿಕ ಆರ್ಥಿಕತೆಯ ಮೇಲೆ ಪರಿಣಾಮಕಾರಿ ಪ್ರಭಾವ ಬೀರಬಹುದಾಗಿತ್ತು. ಆದರೆ, ಲಾಕ್‌ಡೌನ್‌ನಿಂದಾಗಿ ಹೊಂದಾಣಿಕೆಯ ಪ್ರತಿಕ್ರಿಯೆ ಹಾಗೂ ಜೀವಗಳನ್ನು ಮತ್ತು ಜೀವನವನ್ನು ಉಳಿಸಲು ಸಾಧ್ಯವಾಯಿತು ಎಂದು ಮುಖ್ಯ ಆರ್ಥಿಕ ಸಲಹೆಗಾರ ಕೆ.ವಿ.ಸುಬ್ರಮಣಿಯನ್‌ ಹೇಳಿದ್ದಾರೆ.

ಬಜೆಟ್‌ಗೂ ಮುನ್ನ ಷೇರುಪೇಟೆಯಲ್ಲಿ ತಲ್ಲಣ

ಶುಕ್ರವಾರ ದಿನದ ವಹಿವಾಟು ಅಂತ್ಯಕ್ಕೆ ಸೆನ್ಸೆಕ್ಸ್‌ 588 ಅಂಶ ಕುಸಿತ, ನಿಫ್ಟಿ 182 ಅಂಶ ಕಡಿತ

ನೋಡಿ: ಆರ್ಥಿಕ ಸಮೀಕ್ಷೆಗೆ ಸಂಬಂಧಿಸಿದಂತೆ ಮುಖ್ಯ ಆರ್ಥಿಕ ಸಲಹೆಗಾರ ಕೆ.ವಿ.ಸುಬ್ರಮಣಿಯನ್‌ ಅವರಿಂದ ವಿವರಣೆ ಇಲ್ಲಿದೆ

ಆರ್ಥಿಕ ಸಮೀಕ್ಷೆ ವಿವರಣೆ

ಆರ್ಥಿಕ ಸಮೀಕ್ಷೆ 2020–21 ಬಿಡುಗಡೆ


ಮುಖ್ಯ ಆರ್ಥಿಕ ಸಲಹೆಗಾರ ಕೆ.ವಿ.ಸುಬ್ರಮಣಿಯನ್‌ ಆರ್ಥಿಕ ಸಮೀಕ್ಷೆಯ ಡಿಜಿಟಲ್‌ ಪ್ರತಿ ಬಿಡುಗಡೆ ಮಾಡಿದರು.

ADVERTISEMENT

ರಾಜ್ಯ ಸಭೆ ಅಧಿವೇಶನ ಫೆ.1ಕ್ಕೆ ಮುಂದೂಡಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶುಕ್ರವಾರ ಮಧ್ಯಾಹ್ನ ರಾಜ್ಯ ಸಭೆಯಲ್ಲಿ 2020–21ರ ಆರ್ಥಿಕ ಸಮೀಕ್ಷೆ ಮಂಡಿಸಿದರು. ನಂತರ ಅಧಿವೇಶನವನ್ನು ಫೆಬ್ರುವರಿ 1ಕ್ಕೆ ಮುಂದೂಡಲಾಯಿತು. 

ದೇಶದ ಆರ್ಥಿಕತೆಗೆ‌ ಕೃಷಿ ವಲಯದ ಆಸರೆ

2020–21ರಲ್ಲಿ ಕೋವಿಡ್‌–19 ಸಾಂಕ್ರಾಮಿಕದಿಂದ ಎದುರಾದ ತಲ್ಲಣಕ್ಕೆ ಕೃಷಿ ವಲಯದಿಂದ ಸಾಂತ್ವನ ಸಿಗಲಿದ್ದು, ಭಾರತದ ಆರ್ಥಿಕತೆ ಶೇ 3.4ರಷ್ಟು ಬೆಳವಣಿಗೆ ಕಾಣಲಿದೆ: ಆರ್ಥಿಕ ಸಮೀಕ್ಷೆ

ರಾಜ್ಯ ಸಭೆ ಅಧಿವೇಶನ ಆರಂಭ

2022ನೇ ಹಣಕಾಸು ವರ್ಷದಲ್ಲಿ ಬೆಳವಣಿಗೆ ದರ ಶೇ 11.5

ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಆಧಾರದಲ್ಲಿ 2021ನೇ ಹಣಕಾಸು ವರ್ಷದಲ್ಲಿ ಬೆಳವಣಿಗೆ ದರ –7.7% ಮತ್ತು 2022ನೇ ಹಣಕಾಸು ವರ್ಷದಲ್ಲಿ ಬೆಳವಣಿಗೆ ದರ ಶೇ 11.5ರಷ್ಟು ಅಂದಾಜಿಸಲಾಗಿದೆ.

ಲೋಕಸಭಾ ಅಧಿವೇಶನ ಮುಂದೂಡಿಕೆ

ಶುಕ್ರವಾರದಿಂದ ಆರಂಭವಾಗಿರುವ ಲೋಕಸಭೆ ಬಜೆಟ್‌ ಅಧಿವೇಶನವನ್ನು ಫೆಬ್ರುವರಿ 1ರ (ಸೋಮವಾರ) ಬೆಳಿಗ್ಗೆ 11ರ ವರೆಗೂ ಮುಂದೂಡಲಾಗಿದೆ.

ರಾಜ್ಯಸಭೆಯು 3 ಗಂಟೆಗೆ ಪುನರಾರಂಭಗೊಳ್ಳಲಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ಸಮೀಕ್ಷೆ ಮಂಡನೆ ಮಾಡಲಿದ್ದಾರೆ. 

ಕೃಷಿ ಕಾಯ್ದೆಗಳ ಪ್ರಯೋಜನ ಹಲವು ರೈತರನ್ನು ತಲುಪುತ್ತಿದೆ: ನಾಯ್ಡು

ದೇಶದ ಕೋವಿಡ್–19 ಲಸಿಕೆ ಅಭಿಯಾನ ಮತ್ತು ಕೃಷಿ ಕಾಯ್ದೆಗಳನ್ನು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಶ್ಲಾಘಿಸಿದ್ದಾರೆ.

ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಆರಂಭಿಸಿದ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು

ಸುಮಾರು 10 ಕೋಟಿ ಸಣ್ಣ ರೈತರಿಗೆ ಮೂರು ಹೊಸ ಕೃಷಿ ಕಾಯ್ದೆಗಳ ಪ್ರಯೋಜನ ದೊರೆಯಲು ಆರಂಭವಾಗಿದೆ. ಅನೇಕ ರಾಜಕೀಯ ಪಕ್ಷಗಳೂ ಈ ಕಾಯ್ದೆಗಳನ್ನು ಬೆಂಬಲಿಸಿವೆ

ಈಶಾನ್ಯ ರಾಜ್ಯಗಳಲ್ಲಿ ಯುವಕರು ಮುಖ್ಯವಾಹಿನಿಗೆ ಬರುತ್ತಿದ್ದಾರೆ. ದೇಶ ಕಟ್ಟುವ ಕಾಯಕದಲ್ಲಿ ಕೈಜೋಡಿಸುತ್ತಿದ್ದಾರೆ: ಕೋವಿಂದ್

ಈಶಾನ್ಯ ರಾಜ್ಯಗಳಲ್ಲಿ ತೀವ್ರವಾದ ಕಡಿಮೆಯಾಗಿದೆ. ಐತಿಹಾಸಿಕ ಬೋಡೊ ಒಪ್ಪಂದವನ್ನು ಶಾಂತಿಯುತವಾಗಿ ಅನುಷ್ಠಾನಗೊಳಿಸಲಾಗಿದೆ: ಕೋವಿಂದ್

ದೇಶವು ಕೋವಿಡ್‌ ಕಾಲದ ಹೊಡೆತದಿಂದ ಚೇತರಿಸಿಕೊಳ್ಳುತ್ತಿದೆ. ಕಠಿಣ ಸನ್ನಿವೇಶದ ಹೊರತಾಗಿಯೂ ಜಾಗತಿಕ ಹೂಡಿಕೆದಾರರಿಗೆ ಭಾರತವು ಪ್ರಶಸ್ತ ಸ್ಥಳವಾಗಿ ಹೊರಹೊಮ್ಮಿದೆ: ಕೋವಿಂದ್

ಹೊಸ ಸಂಸತ್‌ ಕಟ್ಟಡ ನಿರ್ಮಾಣಕ್ಕೆ ಹಿಂದಿನ ಸರ್ಕಾರಗಳು ಪ್ರಯತ್ನ ಮಾಡಿದ್ದವು. ಸ್ವಾತಂತ್ರ್ಯೋತ್ಸವದ 75ನೇ ವರ್ಷದತ್ತ ಅಡಿಯಿಡುತ್ತಿರುವಾಗ ಹೊಸ ಸಂಸತ್‌ ಕಟ್ಟಡ ನಿರ್ಮಾಣ ಆರಂಭಿಸಿದ್ದು ಕಾಕತಾಳೀಯ ಮತ್ತು ಸಂತಸದ ವಿಚಾರ: ರಾಷ್ಟ್ರಪತಿ ಕೋವಿಂದ್

ಕೃಷಿ ಕಾಯ್ದೆಗಳ ಜಾರಿಗೆ ಮುನ್ನ ರೈತರಿಗೆ ನೀಡಲಾಗಿದ್ದ ಹಕ್ಕುಗಳನ್ನು ಕಸಿಯುವುದಿಲ್ಲ. ಬದಲಿಗೆ ಹೆಚ್ಚುವರಿ ಸೌಲಭ್ಯ, ಹಕ್ಕುಗಳನ್ನು ಕೃಷಿ ಕಾಯ್ದೆಗಳ ಮೂಲಕ ನೀಡಲಾಗಿದೆ: ಕೋವಿಂದ್

ಕಾನೂನನ್ನು ಕಡ್ಡಾಯವಾಗಿ ಪಾಲಿಸಬೇಕು: ಕೋವಿಂದ್

ರಾಷ್ಟ್ರಧ್ವಜ ಮತ್ತು ಗಣರಾಜ್ಯೋತ್ಸವದ ಪವಿತ್ರ ದಿನವನ್ನೇ ಅವಮಾನಿಸಲಾಯಿತು. ಸಂವಿಧಾನವು ನಮಗೆ ವಾಕ್ ಸ್ವಾತಂತ್ರ್ಯ ನೀಡುತ್ತದೆ. ಅದೇ ಸಂವಿಧಾನವು ಕಾನೂನು ಮತ್ತು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎನ್ನುತ್ತದೆ ಎಂದು ರಾಷ್ಟ್ರಪತಿ ಹೇಳಿದ್ದಾರೆ.

ಗಣರಾಜ್ಯೋತ್ಸವದ ದಿನದ ಟ್ರ್ಯಾಕ್ಟರ್ ರ್‍ಯಾಲಿ ವೇಳೆ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಹಿಂಸಾಚಾರವನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಖಂಡಿಸಿದ್ದಾರೆ

ಆತ್ಮ ನಿರ್ಭರ ಭಾರತ ರೈತರ ಜೀವನ ಮಟ್ಟ ಸುಧಾರಿಸಿದೆ: ಕೋವಿಂದ್

ಕೋವಿಡ್ ತಡೆಗೆ ಸರ್ಕಾರದ ಸಕಾಲಿಕ ನಿರ್ಧಾರದಿಂದ ಲಕ್ಷಾಂತರ ಮಂದಿಯ ಜೀವ ಉಳಿದಿದೆ: ಕೋವಿಂದ್

ಕೊರೊನಾ ವೈರಸ್ ಸಾಂಕ್ರಾಮಿಕಕ್ಕೆ ಸಂಬಂದಿಸಿ ಸರ್ಕಾರ ಕೈಗೊಂಡ ಸಕಾಲಿಕ ನಿರ್ಧಾರದಿಂದ ಲಕ್ಷಾಂತರ ನಾಗರಿಕರ ಜೀವ ಉಳಿದಿದೆ. ಇಂದು ಕೋವಿಡ್ ಪ್ರಕರಣಗಳ ಸಂಖ್ಯೆ ದೇಶದಲ್ಲಿ ಕಡಿಮೆಯಾಗುತ್ತಿದೆ. ಗುಣಮುಖರಾಗುವವರ ಸಂಖ್ಯೆ ಹೆಚ್ಚಿದೆ: ಕೋವಿಂದ್

ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದ ರಾಷ್ಟ್ರಪತಿ ಕೋವಿಂದ್

‘ಕೋವಿಡ್ ವಿರುದ್ಧದ ಹೋರಾಟದಲ್ಲಿ ನಾವು ಅನೇಕ ನಾಗರಿಕರನ್ನು ಕಳೆದುಕೊಂಡಿದ್ದೇವೆ. ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರೂ ಕೊರೊನಾ ಸಮಯದಲ್ಲೇ ಇಹಲೋಕ ತ್ಯಜಿಸಿದ್ದಾರೆ. ಆರು ಮಂದಿ ಸಂಸದರು ಕೊರೊನಾದಿಂದಾಗಿ ಮೃತಪಟ್ಟಿದ್ದಾರೆ. ಅವರೆಲ್ಲರಿಗೆ ನನ್ನ ಗೌರವ ನಮನಗಳು’: ರಾಷ್ಟ್ರಪತಿ ರಾಮನಾಥ ಕೋವಿಂದ್

ಇದು ಹೊಸ ದಶಕದಮ ಹೊಸ ವರ್ಷದ, ಕೊರೊನಾ ಸಾಂಕ್ರಾಮಿಕದ ಮಧ್ಯೆ ನಡೆಯುತ್ತಿರುವ ಮಹತ್ವದ ಅಧಿವೇಶನ: ರಾಷ್ಟ್ರಪತಿ ರಾಮನಾಥ ಕೋವಿಂದ್ ಬಣ್ಣನೆ

ಸಂಸತ್ ಭವನ ತಲುಪಿದ ರಾಷ್ಟ್ರಪತಿ ರಾಮನಾಥ ಕೋವಿಂದ್

ಕೃಷಿ ಕಾಯ್ದೆಗಳನ್ನು ವಿರೋಧಿಸಿ ಎಡಪಕ್ಷಗಳ ಸಂಸದರು ಸಂಸತ್ ಭವನಕ್ಕೆ ಜಾಥಾ ಹಮ್ಮಿಕೊಂಡಿದ್ದಾರೆ

ಇದು ಹೊಸ ದಶಕದ ಮೊದಲ ಅಧಿವೇಶನ. ಈ ದಶಕವು ಭಾರತಕ್ಕೆ ಭವ್ಯ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ತುಂಬಾ ಮಹತ್ವದ್ದು: ಪ್ರಧಾನಿ ಮೋದಿ ಹೇಳಿಕೆ

ಪ್ರತಿಪಕ್ಷಗಳು ರಾಷ್ಟ್ರಪತಿ ಭಾಷಣ ಬಹಿಷ್ಕರಿಸಬಾರದು: ಸಚಿವ ಪ್ರಹ್ಲಾದ ಜೋಷಿ ಮನವಿ

ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ ಭವನಕ್ಕೆ ತಲುಪಿದ್ದು, ಕೆಲವೇ ಕ್ಷಣಗಳಲ್ಲಿ ಅಧಿವೇಶನ ಆರಂಭಗೊಳ್ಳಲಿದೆ.

ಬಜೆಟ್ ಅಧಿವೇಶನ ಉದ್ದೇಶಿಸಿ ಭಾಷಣಕ್ಕೆ ಹಾಜರಾಗುವುದಿಲ್ಲ: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ

ಆರ್ಥಿಕ ಸಮೀಕ್ಷೆ ಸಿದ್ಧತೆ ಹಿಂದಿನ ಶಕ್ತಿ ಕೃಷ್ಣಮೂರ್ತಿ ಸುಬ್ರಮಣಿಯನ್

ರಾಷ್ಟ್ರಪತಿಗಳ ಭಾಷಣ ಬಹಿಷ್ಕರಿಸಲು ಪ್ರತಿಪಕ್ಷಗಳ ನಿರ್ಧಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.