ADVERTISEMENT

ಕರ್ನಾಟಕ ಬಜೆಟ್‌ 2020 | ವಲಯವಾರು ಲೆಕ್ಕಾಚಾರ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2020, 18:16 IST
Last Updated 5 ಮಾರ್ಚ್ 2020, 18:16 IST
   

ಕರ್ನಾಟಕ ಬಜೆಟ್‌ನ ಮಾದರಿಯೇ ಬದಲಾಗಿದ್ದು, ಇಲಾಖಾವಾರು ಅನುದಾನ ಹಂಚಿಕೆ ಬದಲಿಗೆ ವಲಯವಾರು ಹಂಚಿಕೆ ಮಾಡುವ ಹೊಸ ಪದ್ಧತಿಯನ್ನು ಈ ವರ್ಷ ಚಾಲ್ತಿಗೆ ತರಲಾಗಿದೆ.

ಇದರಿಂದಾಗಿ ಬಜೆಟ್‌ನ ನಿರೂಪಣಾಕ್ರಮವೇ ಬದಲಾಗಿದೆ. ಯಾವ ಇಲಾಖೆಗೆ, ಆದ್ಯತಾ ವಲಯಕ್ಕೆ ಎಷ್ಟು ಹಂಚಿಕೆ ಮಾಡಲಾಗಿದೆ ಎಂಬುದು ಗೊತ್ತಾಗದಷ್ಟು ಬಜೆಟ್‌ ಗೊಂದಲದಿಂದ ಕೂಡಿದೆ. ಆಯವ್ಯಯ ಪಕ್ಷಿನೋಟದಲ್ಲೂ ನಿರ್ದಿಷ್ಟ ಲೆಕ್ಕ ಶೀರ್ಷಿಕೆಯಡಿ ಅನುದಾನ ಹಂಚಿಕೆ ಮಾಡಿದ ವಿವರಗಳಿಲ್ಲ. ಸಂಬಂಧ ಪಟ್ಟ ಖಾತೆ ನಿರ್ವಹಿಸುವ ಸಚಿವರಿಗೂ ತಮ್ಮ ಇಲಾಖೆಗೆ ಎಷ್ಟು ಅನುದಾನ ಲಭ್ಯವಾಗಿದೆ ಎಂಬ ಮಾಹಿತಿಗಳು ಇಲ್ಲದಂತಾಗಿದೆ. ಯೋಜನೆಯ ಹೆಸರಿಗೆ ಅನುದಾನ ಹಂಚಿಕೆ ಮಾಡಿದರೆ ಯೋಜನೆ ಅನುಷ್ಠಾನವಾಗುವ ಕ್ಷೇತ್ರದ ಶಾಸಕರು ಹಣ ಬಿಡುಗಡೆಗೆ ಒತ್ತಡ ಹೇರಲಿದ್ದಾರೆ, ಆಗ ಇರುವ ಸಂಪನ್ಮೂಲವನ್ನು ಹಂಚಿಕೆ ಮಾಡುವುದು ಕಷ್ಟವಾಗಲಿದೆ. ಇದರಿಂದ ಪಾರಾಗಲು ಯಡಿಯೂರಪ್ಪ ಅವರು ಈ ಹೊಸಮಾರ್ಗ ಹಿಡಿದಿದ್ದಾರೆ ಎಂದು ಹೇಳಲಾಗುತ್ತಿದೆ.

ವಲಯ: ಮೊತ್ತ(₹ಕೋಟಿಗಳಲ್ಲಿ)
ಕೃಷಿ ಮತ್ತು ಪೂರಕ ಚಟುವಟಿಕೆ:32,259
ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ:72,093
ಆರ್ಥಿಕ ಅಭಿವೃದ್ಧಿ ಪ್ರಚೋದನೆ: 8,772
ಸಂಸ್ಕೃತಿ, ಪರಂಪರೆ ಮತ್ತು ನೈಸರ್ಗಿಕ ಸಂಪನ್ಮೂಲ ರಕ್ಷಣೆ: 4,552
ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆಗಳು: 10,194

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.