ಲಕ್ಷದ್ವೀಪ
ಪಿಟಿಐ ಚಿತ್ರ
ನವದೆಹಲಿ: ಲಕ್ಷದ್ವೀಪ ಸೇರಿದಂತೆ ದ್ವೀಪ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯ ಮತ್ತು ಸೌಲಭ್ಯ ಕಲ್ಪಿಸುವ ಮೂಲಕ ದೇಶಿ ಪ್ರವಾಸೋದ್ಯಮಕ್ಕೆ ಸರ್ಕಾರ ಉತ್ತೇಜನ ನೀಡಲಿದೆ.
ಆರ್ಥಿಕತೆಯ ಬಲವು ದೇಶವನ್ನು ಉದ್ಯಮ ಮತ್ತು ಕಾನ್ಫರೆನ್ಸ್ ಪ್ರವಾಸೊದ್ಯಮದ ಆಕರ್ಷಕ ತಾಣವಾಗಿ ರೂಪಿಸುತ್ತಿದೆ. ಮಧ್ಯಮ ವರ್ಗ ಕೂಡಾ ಇನ್ನು ಪ್ರವಾಸ ತೆರಳುವ, ಹೆಚ್ಚಿನ ಸ್ಥಳಗಳಿಗೆ ಭೇಟಿ ನೀಡಬಹುದು. ಆಧ್ಯಾತ್ಮಿಕ ಪ್ರವಾಸೋದ್ಯಮ ಒಳಗೊಂಡಂತೆ ಪ್ರವಾಸ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ ಎಂದರು.
ಜಾಗತಿಕ ಮಟ್ಟಕ್ಕೆ ಸಮಾನವಾಗಿ ಪ್ರಮುಖ ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿಗೆ ರಾಜ್ಯಗಳಿಗೆ ಉತ್ತೇಜನ ನೀಡಲಿದ್ದು, ಗುಣಮಟ್ಟ, ಸೌಲಭ್ಯಗಳ ಆಧಾರದಲ್ಲಿ ಪ್ರವಾಸಿ ತಾಣಗಳಿಗೆ ಶ್ರೇಣಿ ನೀಡಲಾಗುವುದು ಎಂದರು. ಉತ್ತೇಜನ ಕ್ರಮವಾಗಿ ರಾಜ್ಯಗಳಿಗೆ ದೀರ್ಘಾವಧಿ ಬಡ್ಡಿರಹಿತ ಸಾಲಸೌಲಭ್ಯವನ್ನು ಒದಗಿಸಲಾಗುವುದು ಎಂದರು.
ದೇಶಿ ಪ್ರವಾಸೋದ್ಯಮ ಪ್ರಗತಿಗಾಗಿ ಬಂದರು ಸಂಪರ್ಕ ಹಾಗೂ ಲಕ್ಷದ್ವೀಪ ಸೇರಿ ದ್ವೀಪ ಪ್ರದೇಶಗಳಲ್ಲಿ ಸೌಲಭ್ಯ ಕಲ್ಪಿಸಲಿದ್ದು, ಇದು ಉದ್ಯೋಗಾವಕಾಶಗಳ ಸೃಷ್ಟಿಗೂ ನೆರವಾಗಲಿದೆ ಎಂದು ಆಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.