
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಇಂದು (ಭಾನುವಾರ) 2026-27ನೇ ಸಾಲಿನ ಕೇಂದ್ರ ಬಜೆಟ್‌ಗೆ ಅನುಮೋದನೆ ನೀಡಿದೆ.
ಅನುಮೋದನೆಯ ಬಳಿಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಬಜೆಟ್ ಮಂಡಿಸಲಿದ್ದಾರೆ.
ಜಾಗತಿಕ ಅನಿಶ್ಚಿತತೆ ಮತ್ತು ರಫ್ತು ಕುಸಿತದ ನಡುವೆ ಈ ಬಜೆಟ್ ಮಂಡನೆ ಆಗಲಿದೆ.
ರಾಷ್ಟ್ರಪತಿ ಭವನಕ್ಕೆ ಹೋಗುವ ಮೊದಲು, ಸೀತಾರಾಮನ್ ತಮ್ಮ ಬಜೆಟ್ ತಂಡದ ಸದಸ್ಯರೊಂದಿಗೆ ಕರ್ತವ್ಯ ಭವನದ ಮುಂದೆ ರಾಷ್ಟ್ರೀಯ ಲಾಂಛನವಿರುವ ಟ್ಯಾಬ್ಲೆಟ್ ಅನ್ನು ಪ್ರದರ್ಶಿಸಿದರು. ಈ ಬಾರಿ ನಿರ್ಮಲಾ ಅವರು ಕೆನ್ನೇರಳೆ ಬಣ್ಣದ ತಮಿಳುನಾಡಿದ ಕಾಂಚೀವರಂ ಸೀರೆ ಧರಿಸಿ, ಶಾಲು ತೊಟ್ಟು ಬಂದಿದ್ದಾರೆ.
‘ಡಿಜಿಟಲ್ ಬಹಿ ಖಾತಾ’ ಹಿಡಿದು ಸೀತಾರಾಮನ್ ಬಂದಿದ್ದಾರೆ. ಹೀಗಾಗಿ ಈ ಬಾರಿಯೂ ಕಾಗದ ರಹಿತ ಬಜೆಟ್ ಮಂಡನೆ ಇರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.