ADVERTISEMENT

ಪೇಟಿಎಂಗೆ ವಿಧಿಸಿರುವ ಗಡುವು ವಿಸ್ತರಿಸಲ್ಲ: ದಾಸ್‌

ಪಿಟಿಐ
Published 6 ಮಾರ್ಚ್ 2024, 16:27 IST
Last Updated 6 ಮಾರ್ಚ್ 2024, 16:27 IST
<div class="paragraphs"><p>ಪೇಟಿಎಂ</p></div>

ಪೇಟಿಎಂ

   

ನವದೆಹಲಿ: ‘ಮಾರ್ಚ್‌ 15ರ ನಂತರ ಎಲ್ಲ ಬಗೆಯ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ಗೆ ವಿಧಿಸಿರುವ ನಿರ್ಬಂಧವನ್ನು ಯಾವುದೇ ಕಾರಣಕ್ಕೂ ಮತ್ತೆ ವಿಸ್ತರಣೆ ಮಾಡುವುದಿಲ್ಲ’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಶಕ್ತಿಕಾಂತ ದಾಸ್‌ ಸ್ಪಷ್ಟಪಡಿಸಿದ್ದಾರೆ.

ಆರ್‌ಬಿಐ ಕ್ರಮದಿಂದ ಪೇಟಿಎಂ ವ್ಯಾಲೆಟ್‌ನ ಶೇ 85ರಷ್ಟು ಬಳಕೆದಾರರಿಗೆ ಯಾವುದೇ ಸಮಸ್ಯೆಯಾಗಿಲ್ಲ. ಉಳಿದ ಬಳಕೆದಾರರಿಗೆ ಬೇರೆ ಬ್ಯಾಂಕ್‌ಗಳಿಗೆ ವ್ಯವಹಾರವನ್ನು ಬದಲಾಯಿಸಿಕೊಳ್ಳಲು ಸೂಚಿಸಲಾಗಿದೆ. ಪೇಟಿಎಂ ಬ್ಯಾಂಕ್‌ ಮೇಲಷ್ಟೇ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ADVERTISEMENT

ಪೇಟಿಎಂ ಪೇಮೆಂಟ್‌ ಆ್ಯಪ್‌ನ ಪರವಾನಗಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಪಾವತಿ ನಿಗಮವು (ಎನ್‌ಪಿಸಿಐ) ನಿರ್ಧಾರ ಕೈಗೊಳ್ಳಲಿದೆ. ನಿಗಮವು ಕೈಗೊಳ್ಳುವ ನಿರ್ಣಯವನ್ನು ನಾವು ವಿರೋಧಿಸುವುದಿಲ್ಲ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.