ADVERTISEMENT

ಒಂದು ತಿಂಗಳು ಕಳೆದರೂ ಬಗೆಹರಿಯದ ಹೊಸ ಐಟಿ ಪೋರ್ಟಲ್‌ ಸಮಸ್ಯೆ

ಪಿಟಿಐ
Published 11 ಜುಲೈ 2021, 7:45 IST
Last Updated 11 ಜುಲೈ 2021, 7:45 IST
,
,   

ನವದೆಹಲಿ: ದೇಶದಲ್ಲಿ ನೂತನವಾಗಿ ಅಳವಡಿಸಲಾಗಿರುವ ಆದಾಯ ತೆರಿಗೆ ಪೋರ್ಟಲ್‌ನಲ್ಲಿ ತಿಂಗಳ ನಂತರವೂ ತಾಂತ್ರಿಕ ತೊಂದರೆಗಳು ಮುಂದುವರಿದಿದ್ದು, ಇ–‍ಪ್ರೊಸೀಡಿಂಗ್‌, ಡಿಜಿಟಲ್‌ ಸಿಗ್ನೇಚರ್‌ ಸರ್ಟಿಫಿಕೇಟ್‌ನಂತಹ ಪ್ರಮುಖ ಸೌಲಭ್ಯಗಳು ಇನ್ನೂ ಕಾರ್ಯನಿರ್ವಹಿಸುತ್ತಿಲ್ಲ ಎಂದು ಲೆಕ್ಕಪರಿಶೋಧಕರು ಆರೋಪಿಸಿದ್ದಾರೆ.

ಪೋರ್ಟಲ್‌ಗೆ ಲಾಗಿನ್‌ ಆಗುವಲ್ಲಿ ಸಮಸ್ನೆ ಎದುರಾಗುತ್ತಿದೆ ಎಂದು ಕೆಲವು ಸಾಗರೋತ್ತರ ಕಂಪನಿಗಳು ದೂರಿವೆ.

'www.incometax.gov.in’ ಪೋರ್ಟಲ್‌ ಅನ್ನು ಜೂನ್‌ 7ರಂದು ಆರಂಭಿಸಲಾಗಿತ್ತು. ಇದಾದ ಬಳಿಕ ಸತತ ಎರಡು ವಾರಗಳ ಕಾಲ ತಾಂತ್ರಿಕ ಸಮಸ್ಯೆ ಮುಂದುವರಿದಿತ್ತು. ಜೂನ್‌ 22ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಪೋರ್ಟಲ್‌ ಅಭಿವೃದ್ಧಿಪಡಿಸಿರುವ ಇನ್ಫೊಸಿಸ್‌ ಅಧಿಕಾರಿಗಳ ಜತೆಗೆ ಸಭೆ ನಡೆಸಿದ್ದರು.‌

ADVERTISEMENT

ಆದಾಯ ತೆರಿಗೆ ರಿಟರ್ನ್ಸ್‌ ಪ್ರಕ್ರಿಯೆಯನ್ನು 63 ದಿನಗಳಿಂದ ಒಂದು ದಿನಕ್ಕೆ ಇಳಿಸುವುದು ಹಾಗೂ ತೆರಿಗೆ ಪಾವತಿದಾರರಿಗೆ ತ್ವರಿತವಾಗಿ ಹಣ ವಾಪಸ್ ಮಾಡಿಸುವ ಉದ್ದೇಶದೊಂದಿಗೆ ಈ ಹೊಸ ಪೋರ್ಟಲ್‌ ಅಭಿವೃದ್ಧಿಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.