ADVERTISEMENT

ಬೈಜುಸ್‌ ಸಮೂಹದ ಆಕಾಶ್‌ ಶಿಕ್ಷಣ ಸಂಸ್ಥೆಗೆ ಸಿಇಒ ನೇಮಕ

ಪಿಟಿಐ
Published 8 ಏಪ್ರಿಲ್ 2024, 14:32 IST
Last Updated 8 ಏಪ್ರಿಲ್ 2024, 14:32 IST
   

ನವದೆಹಲಿ: ಬೈಜುಸ್‌ ಸಮೂಹದ ಆಕಾಶ್‌ ಎಜುಕೇಷನಲ್‌ ಸರ್ವಿಸಸ್‌ ಲಿಮಿಟೆಡ್‌ನ (ಎಇಎಸ್‌ಎಲ್‌) ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ದೀಪಕ್‌ ಮೆಹ್ರೋತ್ರಾ ನೇಮಕವಾಗಿದ್ದಾರೆ.

2023ರ ಸೆಪ್ಟೆಂಬರ್‌ನಲ್ಲಿ ಸಿಇಒ ಅಭಿಷೇಕ್‌ ಮಹೇಶ್ವರಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಏಳು ತಿಂಗಳ ನಂತರ ಮೆಹ್ರೋತ್ರಾ ನೇಮಕವಾಗಿದ್ದು, ಅವರ ನೇಮಕಾತಿ ತಕ್ಷಣದಿಂದಲೇ ಜಾರಿಗೆ ಬಂದಿದೆ ಎಂದು ಕಂಪನಿ ಸೋಮವಾರ ತಿಳಿಸಿದೆ.

35 ವರ್ಷಕ್ಕೂ ಹೆಚ್ಚು ಅನುಭವವಿರುವ ಮೆಹ್ರೋತ್ರಾ ಅವರು, ಎಫ್‌ಎಂಸಿಜಿ, ಟೆಲಿಕಾಂ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಜೊತೆಗೆ ಆಶೀರ್ವಾದ್‌ ಪೈಪ್ಸ್‌ನಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ, ಪಿಯರ್ಸನ್ ಇಂಡಿಯಾ, ಭಾರ್ತಿ ಏರ್‌ಟೆಲ್‌, ಕೋಕಾ-ಕೋಲಾ ಮತ್ತು ಏಷ್ಯನ್‌ ಪೇಂಟ್ಸ್‌ನಲ್ಲಿ ವಿವಿಧ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಐಐಟಿ ರೂರ್ಕಿಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ ವಿಷಯದಲ್ಲಿ ಪದವಿ ಪಡೆದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.