ನವದೆಹಲಿ: ಸಿಮೆಂಟ್ ತಯಾರಿಕಾ ಕಂಪನಿ ಎಸಿಸಿ ಲಿಮಿಟೆಡ್, ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹388 ಕೋಟಿ ನಿವ್ವಳ ಲಾಭ ಗಳಿಸಿದೆ.
ಈಗ ಅದಾನಿ ಸಿಮೆಂಟ್ಸ್ನ ಭಾಗವಾಗಿರುವ ಈ ಕಂಪನಿಯು ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹87 ಕೋಟಿಯಷ್ಟು ನಷ್ಟ ಅನುಭವಿಸಿತ್ತು. ಕಾರ್ಯಾಚರಣಾ ವರಮಾನ ಶೇ 11ರಷ್ಟು ಹೆಚ್ಚಾಗಿ ₹4,434 ಕೋಟಿಗೆ ತಲುಪಿದೆ. ಮಾರಾಟದಲ್ಲಿ ಹೆಚ್ಚಳ, ಪ್ರಿಮಿಯಂ ಉತ್ಪನ್ನಗಳಿಗೆ ಉತ್ತಮ ಬೇಡಿಕೆ ಮತ್ತು ಕಾರ್ಯಾಚರಣೆಯಲ್ಲಿ ದಕ್ಷತೆ ಹೆಚ್ಚಾಗಿರುವುದರಿಂದ ಲಾಭ ಗಳಿಸಲು ಸಾಧ್ಯವಾಗಿದೆ ಎಂದು ಕಂಪನಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.