ಬೆಂಗಳೂರು: ನಗರದ ರಾಜಾಜಿನಗರ ಒಂದನೇ ಬ್ಲಾಕ್‌ನ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಇತ್ತೀಚೆಗೆ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ನವೀಕೃತ ಮಳಿಗೆಯನ್ನು ಉದ್ಘಾಟಿಸಲಾಯಿತು.
ನಟಿ ಶ್ರೀನಿಧಿ ಶೆಟ್ಟಿ ಹಾಗೂ ಶಾಸಕ ಕೆ. ಗೋಪಾಲಯ್ಯ ಅವರು ಈ ಮಳಿಗೆಯನ್ನು ಉದ್ಘಾಟಿಸಿದರು. ಕರ್ನಾಟಕ ವಿಭಾಗದ ಮುಖ್ಯಸ್ಥ ಫಿಲ್ಸರ್ ಬಾಬು ಹಾಗೂ ಸಿಬ್ಬಂದಿ ಹಾಜರಿದ್ದರು.
ನವೀಕೃತ ಮಳಿಗೆಯು ವಿಶಾಲವಾಗಿದ್ದು, ಹೆಚ್ಚು ಆಭರಣಗಳ ಸಂಗ್ರಹವನ್ನು ಹೊಂದಿದೆ. ಗ್ರಾಹಕರಿಗೆ ವಿಶ್ವದರ್ಜೆಯ ಶಾಪಿಂಗ್ ಅನುಭವವನ್ನು ನೀಡಲಿದೆ. ಮೈನ್ ಡೈಮಂಡ್ಸ್, ಎರಾ ಅನ್‌ಕಟ್ ಡೈಮಂಡ್ಸ್, ಡಿವೈನ್ ಇಂಡಿಯನ್ ಹೆರಿಟೇಜ್ ಸೇರಿ ಪ್ರತಿಯೊಂದು ಸಂದರ್ಭಕ್ಕೂ ಒಪ್ಪುವಂತಹ ಆಭರಣಗಳ ಸಂಗ್ರಹವಿದೆ ಎಂದು ಕಂಪನಿಯು ತಿಳಿಸಿದೆ.
ರಿಯಾಯಿತಿ ಸೌಲಭ್ಯ ಪ್ರಕಟ:
ಅಕ್ಷಯ ತೃತೀಯ ಹಬ್ಬದ ಅಂಗವಾಗಿ ಗ್ರಾಹಕರಿಗೆ ವಿಶೇಷ ರಿಯಾಯಿತಿ ಪ್ರಕಟಿಸಿದೆ. ಚಿನ್ನಾಭರಣದ ಮೇಕಿಂಗ್ ಮೇಲೆ ಶೇ 25ರ ವರೆಗೆ ಶುಲ್ಕ ವಿನಾಯಿತಿ ಇದೆ. ಪ್ರೆಸಿಯಾ/ಎರಾ ಆಭರಣಗಳ ಮೇಕಿಂಗ್ ಶುಲ್ಕದಲ್ಲಿ ಶೇ 25ರಷ್ಟು ರಿಯಾಯಿತಿ ದೊರೆಯಲಿದೆ. ಡೈಮಂಡ್ಸ್ ಆಭರಣಗಳ ಖರೀದಿ ಮೇಲೆಯೂ ಈ ಸೌಲಭ್ಯವಿದೆ. ಮೇ 12ರ ವರೆಗೆ ಈ ಸೌಲಭ್ಯ ದೊರೆಯಲಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.