ADVERTISEMENT

ಎಫ್‌ಪಿಒ: ಯಶಸ್ಸಿನ ವಿಶ್ವಾಸದಲ್ಲಿ ‘ಅದಾನಿ’

ಪಿಟಿಐ
Published 29 ಜನವರಿ 2023, 15:20 IST
Last Updated 29 ಜನವರಿ 2023, 15:20 IST
   

ನವದೆಹಲಿ (ಪಿಟಿಐ): ₹ 20 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ಅದಾನಿ ಎಂಟರ್‌ಪ್ರೈಸಸ್‌ ಕಂಪನಿ ನಡೆಸಿರುವ ಷೇರು ಮಾರಾಟ ಪ್ರಕ್ರಿಯೆಯು (ಎಫ್‌ಪಿಒ) ಅಂದುಕೊಂಡಂತೆಯೇ ಪೂರ್ಣಗೊಳ್ಳಲಿದೆ, ಎಫ್‌ಪಿಒ ಮುಕ್ತಾಯದ ಹೊತ್ತಿಗೆ ಮಾರಾಟಕ್ಕಿರುವ ಅಷ್ಟೂ ಷೇರುಗಳಿಗೆ ಬಿಡ್ ಸಲ್ಲಿಕೆಯಾಗಿರುತ್ತದೆ ಎಂದು ಅದಾನಿ ಸಮೂಹ ಭಾನುವಾರ ವಿಶ್ವಾಸ ವ್ಯಕ್ತಪಡಿಸಿದೆ.

ಎಫ್‌ಪಿಒ ನೀಡಿಕೆ ಬೆಲೆಯಲ್ಲಿ ಹಾಗೂ ಅವಧಿಯಲ್ಲಿ ಬದಲಾವಣೆ ಇಲ್ಲ ಎಂದು ಅದಾನಿ ಸಮೂಹದ ಮುಖ್ಯ ಹಣಕಾಸು ಅಧಿಕಾರಿ ಜುಗೇಶಿಂದರ್ ಸಿಂಗ್ ಅವರು ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಹಿಂಡನ್‌ಬರ್ಗ್‌ ರಿಸರ್ಚ್‌ ಸಂಸ್ಥೆ ಪ್ರಕಟಿಸಿರುವ ವರದಿಗೆ ಸಮೂಹವು ವಿಸ್ತೃತ ಪ್ರತಿಕ್ರಿಯೆಯನ್ನು ಬಿಡುಗಡೆ ಮಾಡಲಿದೆ ಎಂದು ಅವರು ತಿಳಿಸಿದ್ದಾರೆ. ‘ಯಾವ ಸಂಶೋಧನೆಯನ್ನೂ ಆ ಸಂಸ್ಥೆ ನಡೆಸಿಲ್ಲ, ವಾಸ್ತವವನ್ನು ಆಧಾರರಹಿತವಾಗಿ ತಪ್ಪಾಗಿ ತೋರಿಸಲಾಗಿದೆ ಎಂಬುದನ್ನು ಪ್ರತಿಕ್ರಿಯೆಯಲ್ಲಿ ಹೇಳಲಾಗುತ್ತದೆ’ ಎಂದಿದ್ದಾರೆ.

ADVERTISEMENT

ಅದಾನಿ ಎಂಟರ್‌ಪ್ರೈಸಸ್‌ನ ಈ ಎಫ್‌ಪಿಒ ದೇಶದಲ್ಲಿ ಎರಡನೆಯ ಅತಿದೊಡ್ಡದು. ಆದರೆ ಮೊದಲ ದಿನ ಶೇ 1ರಷ್ಟು ಷೇರುಗಳಿಗೆ ಮಾತ್ರ ಬಿಡ್ ಸಲ್ಲಿಕೆಯಾಗಿದೆ. ಒಟ್ಟು 4.55 ಕೋಟಿ ಷೇರುಗಳು ಮಾರಾಟಕ್ಕೆ ಇದ್ದು, 4.7 ಲಕ್ಷ ಷೇರುಗಳಿಗೆ ಮಾತ್ರ ಬಿಡ್ ಬಂದಿದೆ ಎಂಬ ವಿವರ ಮುಂಬೈ ಷೇರುಪೇಟೆಯಲ್ಲಿ ಇದೆ.

ಸಮೂಹದ ಕಂಪನಿಗಳ ಷೇರು ಮೌಲ್ಯ ಕಡಿಮೆ ಆಗುತ್ತಿರುವುದರಿಂದ ಸಣ್ಣ ಹೂಡಿಕೆದಾರರ ಮೇಲೆ ಕೆಟ್ಟ ಪರಿಣಾಮ ಆಗಬಹುದು ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.