ಬೆಂಗಳೂರು: ಜೈಪ್ರಕಾಶ್ ಅಸೋಸಿಯೇಟ್ಸ್ ಲಿಮಿಟೆಡ್ನ ಸಿಮೆಂಟ್ ಉದ್ದಿಮೆಯನ್ನು ಖರೀದಿಸುವ ಆಲೋಚನೆ ಇಲ್ಲ ಎಂದು ಅದಾನಿ ಎಂಟರ್ಪ್ರೈಸಸ್ ಲಿಮಿಟೆಡ್ ಶುಕ್ರವಾರ ಸ್ಪಷ್ಟಪಡಿಸಿದೆ.
ಸಾಲದ ಸುಳಿಯಲ್ಲಿ ಇರುವ ಜೈಪ್ರಕಾಶ್ ಸಮೂಹದ ಸಿಮೆಂಟ್ ಕಂಪನಿಗಳನ್ನು ₹5 ಸಾವಿರ ಕೋಟಿಗೆ ಖರೀದಿಸಲು ಅದಾನಿ ಸಮೂಹವು ಮಾತುಕತೆ ನಡೆಸುತ್ತಿದೆ ಎಂದು ಮೂಲಗಳು ಹೇಳಿದ್ದವು. ಈ ವರದಿಯ ಬೆನ್ನಲ್ಲೇ ಖರೀದಿಸುವ ನಿರ್ಧಾರ ಇಲ್ಲ ಎಂದು ಅದಾನಿ ಸಮೂಹವು ಷೇರುಪೇಟೆಗೆ ಮಾಹಿತಿ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.