ADVERTISEMENT

100 ಬಿಲಿಯನ್ ಡಾಲರ್ ದಾಟಿದ ಅದಾನಿ ಸಮೂಹದ ಮಾರುಕಟ್ಟೆ ಮೌಲ್ಯ

ಪಿಟಿಐ
Published 6 ಏಪ್ರಿಲ್ 2021, 16:31 IST
Last Updated 6 ಏಪ್ರಿಲ್ 2021, 16:31 IST

ಮುಂಬೈ: ಗೌತಮ್‌ ಅದಾನಿ ಮಾಲೀಕತ್ವದ ಅದಾನಿ ಸಮೂಹವು 100 ಬಿಲಿಯನ್‌ ಡಾಲರ್‌ಗಿಂತ (₹ 7.35 ಲಕ್ಷ ಕೋಟಿ) ಹೆಚ್ಚಿನ ಮಾರುಕಟ್ಟೆ ಬಂಡವಾಳ ಹೊಂದಿರುವ ಭಾರತದ ಮೂರನೆಯ ಉದ್ಯಮ ಸಮೂಹ ಎಂಬ ಹೆಗ್ಗಳಿಕೆಗೆ ಮಂಗಳವಾರ ಪಾತ್ರವಾಯಿತು.

ಅದಾನಿ ಸಮೂಹದ, ಷೇರುಪೇಟೆಯಲ್ಲಿ ನೋಂದಾಯಿತ ಆಗಿರುವ ಆರು ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳವು ಮಂಗಳವಾರದ ವಹಿವಾಟಿನ ಅಂತ್ಯಕ್ಕೆ ₹ 7.84 ಲಕ್ಷ ಕೋಟಿ (106.8 ಬಿಲಿಯನ್ ಡಾಲರ್) ಆಗಿತ್ತು.

ಟಾಟಾ ಸಮೂಹ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನಂತರ, 100 ಬಿಲಿಯನ್‌ ಡಾಲರ್‌ಗಿಂತ ಹೆಚ್ಚಿನ ಮಾರುಕಟ್ಟೆ ಬಂಡವಾಳ ಹೊಂದಿರುವ ಭಾರತದ ಮೂರನೆಯ ಉದ್ಯಮ ಸಮೂಹ ಅದಾನಿ ಅವರದ್ದು. ಗಣಿ, ಬಂದರು, ವಿದ್ಯುತ್ ಉತ್ಪಾದನಾ ಕೇಂದ್ರ, ವಿಮಾನ ನಿಲ್ದಾಣ, ದತ್ತಾಂಶ ಕೇಂದ್ರ, ರಕ್ಷಣೆ ಸೇರಿದಂತೆ ಹಲವು ಉದ್ಯಮ ವಲಯಗಳಲ್ಲಿ ಅದಾನಿ ಸಮೂಹದ ಚಟುವಟಿಕೆಗಳು ವಿಸ್ತರಿಸಿವೆ.

ADVERTISEMENT

ಟಾಟಾ ಸಮೂಹದ ಈಗಿನ ಮಾರುಕಟ್ಟೆ ಬಂಡವಾಳ ಮೌಲ್ಯವು ಅಂದಾಜು 17.78 ಲಕ್ಷ ಕೋಟಿ (242 ಬಿಲಿಯನ್ ಡಾಲರ್), ರಿಲಯನ್ಸ್ ಇಂಡಸ್ಟ್ರೀಸ್‌ನ ಮಾರುಕಟ್ಟೆ ಮೌಲ್ಯ ₹ 12.57 ಲಕ್ಷ ಕೋಟಿ (171 ಬಿಲಿಯನ್ ಡಾಲರ್).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.