ADVERTISEMENT

ಎಫ್ಎಂಸಿಜಿ ವ್ಯವಹಾರದಿಂದ ಅದಾನಿ ವಿಲ್ಮರ್ ಹೊರಕ್ಕೆ

ಪಿಟಿಐ
Published 18 ಜುಲೈ 2025, 15:32 IST
Last Updated 18 ಜುಲೈ 2025, 15:32 IST
ಅದಾನಿ ವಿಲ್ಮರ್
ಅದಾನಿ ವಿಲ್ಮರ್   

ನವದೆಹಲಿ: ಅದಾನಿ ಸಮೂಹವು ತನ್ನ ಎಡಬ್ಲ್ಯುಎಲ್‌ ಅಗ್ರಿ ಬ್ಯುಸಿನೆಸ್‌ ಲಿಮಿಟೆಡ್‌ನಲ್ಲಿ (ಅದಾನಿ ವಿಲ್ಮರ್) ಉಳಿದ ಶೇ 10.42ರಷ್ಟು ಈಕ್ವಿಟಿ ಷೇರುಗಳನ್ನು ಮಾರಾಟ ಮಾಡುವ ಮೂಲಕ ಎಫ್‌ಎಂಸಿಜಿ ವ್ಯವಹಾರದಿಂದ ಹೊರ ಬಂದಿದೆ. 

ಒಟ್ಟು 13.54 ಕೋಟಿ ಈಕ್ವಿಟಿ ಷೇರುಗಳನ್ನು ಪ್ರತಿ ಷೇರಿಗೆ ₹275.50ರಂತೆ ₹3,732 ಕೋಟಿಗೆ ಮಾರಾಟ ಮಾಡಲಾಗಿದೆ ಎಂದು ಕಂಪನಿ ಶುಕ್ರವಾರ ಷೇರುಪೇಟೆಗೆ ತಿಳಿಸಿದೆ.

ದುಬೈ ಮೂಲದ ಕಂಪನಿಯೊಂದು 11.07 ಕೋಟಿಗೂ ಹೆಚ್ಚು ಷೇರುಗಳನ್ನು (ಶೇ 8.52) ₹3,049 ಕೋಟಿಗೆ ಖರೀದಿಸಿದೆ. ಗುರುವಾರದಂದು ಕಂಪನಿಯು ಶೇ 20ರಷ್ಟು ಷೇರುಗಳನ್ನು ₹7,150 ಕೋಟಿಗೆ ಮಾರಾಟ ಮಾಡಿತ್ತು. ಜನವರಿಯಲ್ಲಿ ಶೇ 13.51ರಷ್ಟು ಷೇರುಗಳನ್ನು ₹4,855 ಕೋಟಿಗೆ ಮಾರಾಟ ಮಾಡಿತ್ತು.

ADVERTISEMENT

ಅದಾನಿ ವಿಲ್ಮರ್‌ನಲ್ಲಿನ ತನ್ನ ಶೇ 44ರಷ್ಟು ಷೇರುಗಳನ್ನು ಮಾರಾಟ ಮಾಡಿ, ಮೂಲಸೌಕರ್ಯ ವ್ಯವಹಾರದತ್ತ ಗಮನ ನೀಡಲಾಗುವುದು ಎಂದು ಅದಾನಿ ಸಮೂಹವು ಕಳೆದ ವರ್ಷದ ಡಿಸೆಂಬರ್‌ನಲ್ಲಿ ಘೋಷಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.