ADVERTISEMENT

ಎಸಿಸಿ, ಅಂಬುಜಾ ಸಿಮೆಂಟ್ಸ್‌ ಷೇರು ಖರೀದಿಗೆ ಓಪನ್ ಆಫರ್‌: ಅದಾನಿ

ಪಿಟಿಐ
Published 26 ಆಗಸ್ಟ್ 2022, 14:14 IST
Last Updated 26 ಆಗಸ್ಟ್ 2022, 14:14 IST

ನವದೆಹಲಿ: ಎಸಿಸಿ ಲಿಮಿಟೆಡ್‌ ಮತ್ತು ಅಂಬುಜಾ ಸಿಮೆಂಟ್ಸ್‌ನ ಶೇಕಡ 26ರಷ್ಟು ಹೆಚ್ಚುವರಿ ಷೇರುಗಳನ್ನು ಸ್ವಿಜರ್ಲೆಂಡ್‌ ಮೂಲದ ಹೋಲ್ಸಿಮ್‌ ಕಂಪನಿಯ ಸಾರ್ವಜನಿಕ ಷೇರುದಾರರಿಂದ ಸ್ವಾಧೀನಪಡಿಸಿಕೊಳ್ಳಲು ಅದಾನಿ ಸಮೂಹ ಮುಂದಾಗಿದೆ. ಇದಕ್ಕಾಗಿ ₹ 31 ಸಾವಿರ ಕೋಟಿ ಮೊತ್ತದ ಓಪನ್‌ ಆಫರ್‌ ಅನ್ನು ಶುಕ್ರವಾರ ಬಿಡುಗಡೆ ಮಾಡಿದೆ.

ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಈ ಓಪನ್‌ ಆಫರ್‌ಗೆ ಕಳೆದ ವಾರ ಒಪ್ಪಿಗೆ ನೀಡಿದೆ. ಓಪನ್‌ ಆಫರ್‌ ನಿರ್ವಹಣೆ ಮಾಡುತ್ತಿರುವ ಐಸಿಐಸಿಐ ಸೆಕ್ಯುರಿಟೀಸ್‌ ಮತ್ತು ಡಾಯಿಷ್ ಈಕ್ವಿಟೀಸ್‌ ಇಂಡಿಯಾ ಸಲ್ಲಿಸಿರುವ ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಷೇರು ಖರೀದಿಸುವ ಅವಕಾಶವು ಆಗಸ್ಟ್‌ 26ರಿಂದ ಸೆಪ್ಟೆಂಬರ್‌ 9ರವರೆಗೆ ಇರಲಿದೆ.

ಹೋಲ್ಸಿಮ್‌ ಕಂಪನಿ ಭಾರತದ ವಹಿವಾಟನ್ನು ₹ 83,895 ಕೋಟಿಗೆ ಸ್ವಾಧೀನ ಪಡಿಸಿಕೊಳ್ಳುವ ಒಪ್ಪಂದಕ್ಕೆ ಬಂದಿರುವುದಾಗಿ ಅದಾನಿ ಸಮೂಹವು ಮೇ ತಿಂಗಳಿನಲ್ಲಿ ಘೋಷಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.