ADVERTISEMENT

ಅದಾನಿ ಸಮೂಹ: ₹58,104 ಕೋಟಿ ತೆರಿಗೆ ಪಾವತಿ

ಪಿಟಿಐ
Published 23 ಫೆಬ್ರುವರಿ 2025, 13:30 IST
Last Updated 23 ಫೆಬ್ರುವರಿ 2025, 13:30 IST
ಗೌತಮ್‌ ಅದಾನಿ
ಗೌತಮ್‌ ಅದಾನಿ   

ನವದೆಹಲಿ: 2023–24ನೇ ಆರ್ಥಿಕ ವರ್ಷದಲ್ಲಿ ಅದಾನಿ ಕಂಪನಿಗಳು ₹58,104 ಕೋಟಿ ತೆರಿಗೆ ಪಾವತಿಸಿವೆ ಎಂದು ಅದಾನಿ ಸಮೂಹವು ತಿಳಿಸಿದೆ.

ಜಾಗತಿಕ ಮಟ್ಟದಲ್ಲಿ ಕಂಪನಿಗಳು ನೇರವಾಗಿ ಭರಿಸಿರುವ ತೆರಿಗೆ, ಸುಂಕ ಹಾಗೂ ಇತರೆ ಶುಲ್ಕಗಳು ಈ ಮೊತ್ತದಲ್ಲಿ ಸೇರಿವೆ. ಅಲ್ಲದೆ, ಪರೋಕ್ಷ ತೆರಿಗೆ ರೂಪದಲ್ಲಿ ಮಧ್ಯಸ್ಥಗಾರರ ಪರವಾಗಿ ಸಂಗ್ರಹಿಸಿರುವ ತೆರಿಗೆ, ಸುಂಕ ಹಾಗೂ ಉದ್ಯೋಗಿಗಳಿಗೆ ಸಾಮಾಜಿಕ ಭದ್ರತೆ ಸೌಲಭ್ಯ ಕಲ್ಪಿಸಲು ಪಾವತಿಸಿರುವ ತೆರಿಗೆಯನ್ನು ಇದು ಒಳಗೊಂಡಿದೆ ಎಂದು ವಿವರಿಸಿದೆ.

2022–23ನೇ ಆರ್ಥಿಕ ವರ್ಷದಲ್ಲಿ ₹46,610 ಕೋಟಿ ತೆರಿಗೆ ಪಾವತಿಸಲಾಗಿತ್ತು ಎಂದು ತೆರಿಗೆ ಪಾರದರ್ಶಕತೆ ಕುರಿತಂತೆ ಪ್ರಕಟಿಸಿರುವ ವರದಿಯಲ್ಲಿ ತಿಳಿಸಲಾಗಿದೆ.

ADVERTISEMENT

ಅದಾನಿ ಎಂಟರ್‌ಪ್ರೈಸಸ್‌, ಅದಾನಿ ಪೋರ್ಟ್ಸ್‌, ಅದಾನಿ ಗ್ರೀನ್‌ ಎನರ್ಜಿ, ಅದಾನಿ ಎನರ್ಜಿ ಸಲ್ಯೂಷನ್ಸ್‌, ಅದಾನಿ ಪವರ್, ಅದಾನಿ ಟೋಟಲ್‌ ಗ್ಯಾಸ್‌, ಅದಾನಿ ಸಿಮೆಂಟ್ಸ್‌, ಎನ್‌ಡಿಟಿವಿ, ಎಸಿಸಿ ಮತ್ತು ಶಾಂಘಿ ಇಂಡಸ್ಟ್ರೀಸ್‌ ಸಲ್ಲಿಸಿರುವ ತೆರಿಗೆ ಬಗ್ಗೆ ವಿವರಣೆ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.