ADVERTISEMENT

₹75 ಸಾವಿರ ಕೋಟಿ ತೆರಿಗೆ ಪಾವತಿಸಿದ ಅದಾನಿ ಸಮೂಹ

ಪಿಟಿಐ
Published 5 ಜೂನ್ 2025, 15:23 IST
Last Updated 5 ಜೂನ್ 2025, 15:23 IST
ಅದಾನಿ
ಅದಾನಿ   

ನವದೆಹಲಿ: 2024–25ರ ಆರ್ಥಿಕ ವರ್ಷದಲ್ಲಿ ಅದಾನಿ ಸಮೂಹದ ಕಂಪನಿಗಳು ಒಟ್ಟು ₹74,945 ಕೋಟಿ ತೆರಿಗೆ ಪಾವತಿಸಿವೆ.

2023–24ರ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಕಂಪನಿಗಳು ಒಟ್ಟು ₹58,104 ಕೋಟಿ ತೆರಿಗೆ ಪಾವತಿಸಿದ್ದವು. ಈ ಪಾವತಿಗೆ ಹೋಲಿಸಿದರೆ ಈ ಬಾರಿ ಶೇ 29ರಷ್ಟು ಏರಿಕೆಯಾಗಿದೆ ಎಂದು ಸಮೂಹವು ಗುರುವಾರ ತಿಳಿಸಿದೆ.

ಈ ತೆರಿಗೆಯಲ್ಲಿ ₹28,720 ಕೋಟಿ ನೇರ ತೆರಿಗೆ ಮತ್ತು ₹45,407 ಕೋಟಿ ಪರೋಕ್ಷ ತೆರಿಗೆ ಸೇರಿದೆ. ಇತರೆ ₹818 ಕೋಟಿ ಇದೆ ಎಂದು ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.