ADVERTISEMENT

ಅದಾನಿ ಸಮೂಹ ವೇಗವಾಗಿ ಬೆಳೆಯುತ್ತಿರುವ ಭಾರತೀಯ ಬ್ರ್ಯಾಂಡ್‌

ಪಿಟಿಐ
Published 27 ಜೂನ್ 2025, 15:47 IST
Last Updated 27 ಜೂನ್ 2025, 15:47 IST
ಅದಾನಿ
ಅದಾನಿ   

ನವದೆಹಲಿ: ಅದಾನಿ ಸಮೂಹವು ವೇಗವಾಗಿ ಬೆಳೆಯುತ್ತಿರುವ ಭಾರತೀಯ ಬ್ರ್ಯಾಂಡ್‌ ಆಗಿ ಹೊರಹೊಮ್ಮಿದೆ.

ಅದಾನಿ ಕಂಪನಿಯ ಬ್ರ್ಯಾಂಡ್‌ ಮೌಲ್ಯ 2024ರಲ್ಲಿ ₹30,349 ಕೋಟಿಯಷ್ಟಿತ್ತು. ಪ್ರಸಕ್ತ ವರ್ಷ ₹55,227 ಕೋಟಿಗೆ ಏರಿಕೆಯಾಗಿದ್ದು, ಶೇ 82ರಷ್ಟು ಹೆಚ್ಚಾಗಿದೆ ಎಂದು ಬ್ರ್ಯಾಂಡ್‌ ಮೌಲ್ಯಮಾಪನ ಸಲಹಾ ಸಂಸ್ಥೆ ಬ್ರ್ಯಾಂಡ್ ಫೈನಾನ್ಸ್‌ ಸಿದ್ಧಪಡಿಸಿರುವ ಹೆಚ್ಚು ಮೌಲ್ಯಯುತ ಭಾರತೀಯ ಕಂಪನಿಗಳ 2025ರ ಪಟ್ಟಿಯಲ್ಲಿ ತಿಳಿಸಿದೆ.

ದೇಶದ 100 ಕಂಪನಿಗಳ ಒಟ್ಟು ಬ್ರ್ಯಾಂಡ್ ಮೌಲ್ಯ ₹20.21 ಲಕ್ಷ ಕೋಟಿಯಾಗಿದೆ. ನಿರಂತರ ಬಂಡವಾಳ ಹೂಡಿಕೆ, ಸದೃಢ ದೇಶೀಯ ಬೇಡಿಕೆ ಮತ್ತು ಸಾರ್ವಜನಿಕ-ಖಾಸಗಿ ಪಾಲುದಾರಿಕೆಗಳಿಂದ ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಶೇ 6ರಿಂದ ಶೇ 7ರಷ್ಟಿರಲಿದೆ ಎಂದು ತಿಳಿಸಿದೆ.

ADVERTISEMENT

ಟಾಟಾಗೆ ಮತ್ತೆ ಅಗ್ರಸ್ಥಾನ: ಟಾಟಾ ಸಮೂಹದ ಬ್ರ್ಯಾಂಡ್ ಮೌಲ್ಯ ಶೇ 10ರಷ್ಟು ಏರಿಕೆಯಾಗಿದ್ದು, ₹2.70 ಲಕ್ಷ ಕೋಟಿಯಾಗಿದೆ. ದೇಶದ ಅತ್ಯಂತ ಮೌಲ್ಯಯುತ ಬ್ರ್ಯಾಂಡ್‌ಗಳ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನದಲ್ಲಿದೆ.

ನಂತರದ ಸ್ಥಾನದಲ್ಲಿ ಇನ್ಫೊಸಿಸ್ (₹1.39 ಲಕ್ಷ ಕೋಟಿ), ಎಚ್‌ಡಿಎಫ್‌ಸಿ ಗ್ರೂಪ್‌ (₹1.21 ಲಕ್ಷ ಕೋಟಿ), ಎಲ್‌ಐಸಿ (₹1.16 ಲಕ್ಷ ಕೋಟಿ), ಎಚ್‌ಸಿಎಲ್‌ ಟೆಕ್ (₹76,088 ಕೋಟಿ), ಲಾರ್ಸೆನ್ ಆ್ಯಂಡ್ ಟೊಬ್ರೊ (₹63,261 ಕೋಟಿ) ಮತ್ತು ಮಹೀಂದ್ರ ಸಮೂಹ (₹61,551 ಕೋಟಿ) ಇವೆ ಎಂದು ತಿಳಿಸಿದೆ. 

ಇದೇ ವೇಳೆ ತಾಜ್ ಹೋಟೆಲ್ಸ್ ಸತತ ನಾಲ್ಕನೇ ವರ್ಷವೂ ಭಾರತದ ಸದೃಢ ಬ್ರ್ಯಾಂಡ್ ಎಂಬ ಹೆಗ್ಗಳಿಕೆ ಉಳಿಸಿಕೊಂಡಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.