ADVERTISEMENT

ಎಡಿಬಿಯಿಂದ ಭಾರತಕ್ಕೆ ₹ 2.06 ಲಕ್ಷ ಕೋಟಿ ನೆರವು

ಮುಂದಿನ 5 ವರ್ಷಗಳಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಹಣಕಾಸು ಸಹಾಯ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2023, 15:43 IST
Last Updated 21 ಫೆಬ್ರುವರಿ 2023, 15:43 IST
   

ನವದೆಹಲಿ: ‘ಮೂಲಸೌಕರ್ಯ, ಹವಾಮಾನ ಸಂಬಂಧಿ ಮತ್ತು ಸಾಮಾಜಿಕ ಅಭಿವೃದ್ಧಿ ಯೋಜನೆಗಳಿಗಾಗಿ ಮುಂದಿನ ಐದು ವರ್ಷಗಳಲ್ಲಿ ಭಾರತಕ್ಕೆ ಸುಮಾರು ₹ 2.06 ಲಕ್ಷ ಕೋಟಿ ಹಣಕಾಸಿನ ನೆರವು ನೀಡಲು ಉದ್ದೇಶಿಸಲಾಗಿದೆ’ ಎಂದು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ) ಮಂಗಳವಾರ ಹೇಳಿದೆ.

ಎಡಿಬಿ ಅಧ್ಯಕ್ಷ ಮಸಾಟ್ಸುಗು ಅಸಕಾವಾ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿ ದೇಶದ ಅಭಿವೃದ್ಧಿ ಆದ್ಯತೆಗಳ ಬಗ್ಗೆ ಚರ್ಚಿಸಿದರು.

‘ಭಾರತವನ್ನು ಮುನ್ನಡೆಸಲು ಮುಂದಿನ 5 ವರ್ಷಗಳಲ್ಲಿ ಸುಮಾರು ₹ 2.06 ಲಕ್ಷ ಕೋಟಿ ಹಣಕಾಸಿನ ನೆರವು ಒದಗಿಸುವ ಎಡಿಬಿಯ ಉದ್ದೇಶವನ್ನು ಅಸಕಾವಾ ಅವರು ತಿಳಿಸಿದ್ದಾರೆ’ ಎಂದು ಎಡಿಬಿಯ ಮನಿಲಾ ಪ್ರಧಾನ ಕಚೇರಿಯು ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.