ADVERTISEMENT

ಜಿಡಿಪಿ ಅಂದಾಜು ಪರಿಷ್ಕರಿಸಿದ ಎಡಿಬಿ

ಪಿಟಿಐ
Published 10 ಡಿಸೆಂಬರ್ 2025, 15:48 IST
Last Updated 10 ಡಿಸೆಂಬರ್ 2025, 15:48 IST
.
.   

ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆ ದರ ಶೇ 7.2ರಷ್ಟು ಇರಲಿದೆ ಎಂದು ಏಷ್ಯಾ ಅಭಿವೃದ್ಧಿ ಬ್ಯಾಂಕ್‌ (ಎಡಿಬಿ) ಅಂದಾಜಿಸಿದೆ.

ಈ ಮೊದಲು ಅದು ಜಿಡಿಪಿ ಬೆಳವಣಿಗೆ ಶೇ 6.5ರಷ್ಟಾಗಲಿದೆ ಎಂದು ಹೇಳಿತ್ತು. ಈಗ ಅಂದಾಜನ್ನು ಪರಿಷ್ಕರಿಸಿದ್ದು, ಶೇ 0.7ರಷ್ಟು ಹೆಚ್ಚಿಸಿದೆ. ಈ ಮೊದಲಿನ ಅಂದಾಜಿನಂತೆ 2026–27ರಲ್ಲಿ ಜಿಡಿಪಿ ಬೆಳವಣಿಗೆ ಶೇ 6.5ರಷ್ಟು ಇರಲಿದೆ ಎಂದು ಬುಧವಾರ ಹೇಳಿದೆ.

ದೇಶದಲ್ಲಿ ಹೆಚ್ಚಿದ ಬೇಡಿಕೆ ಮತ್ತು ಆದಾಯ ತೆರಿಗೆ ವಿನಾಯಿತಿಯು ಜಿಡಿಪಿ ಪರಿಷ್ಕರಣೆಗೆ ನೆರವಾಗಿವೆ ಎಂದು ಹೇಳಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.