ADVERTISEMENT

ಗ್ರಾಹಕರ ನೆರವಿಗೆ ಹೆಚ್ಚುವರಿ ಸೇವೆ: ಯೆಸ್‌ ಬ್ಯಾಂಕ್‌

ಪಿಟಿಐ
Published 19 ಮಾರ್ಚ್ 2020, 20:30 IST
Last Updated 19 ಮಾರ್ಚ್ 2020, 20:30 IST
ಯೆಸ್ ಬ್ಯಾಂಕ್
ಯೆಸ್ ಬ್ಯಾಂಕ್   

ಮುಂಬೈ: ‘ಗ್ರಾಹಕರ ಠೇವಣಿ ಸುರಕ್ಷಿತವಾಗಿದ್ದು, ಬ್ಯಾಂಕ್‌ ಬಳಿ ನಗದು ಸಮಸ್ಯೆ ಇಲ್ಲ’ ಎಂದು ಯೆಸ್‌ ಬ್ಯಾಂಕ್‌ನ ನಿಯೋಜಿತ ಸಿಇಒ ಪ್ರಶಾಂತ್‌ ಕುಮಾರ್‌ ಅವರು ತಿಳಿಸಿದ್ದಾರೆ.

ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ಶುಕ್ರವಾರ ಮತ್ತುಶನಿವಾರ ಬೆಳಿಗ್ಗೆ 8.30ರಿಂದಲೇ ಶಾಖೆಗಳು ಕಾರ್ಯಾರಂಭ ಮಾಡಲಿವೆ’ ಎಂದು ಹೇಳಿದ್ದಾರೆ.

ಖಾತೆ ವರ್ಗಾವಣೆ: ಪುರಿ ಜಗನ್ನಾಥ ದೇವಸ್ಥಾನದ ₹389 ಕೋಟಿ ಮೊತ್ತದ ಎಫ್‌ಡಿ ಖಾತೆಯನ್ನು ಎಸ್‌ಬಿಐಗೆ ವರ್ಗಾಯಿಸಲಾಗಿದೆ ಎಂದು ಬ್ಯಾಂಕ್‌ ತಿಳಿಸಿದೆ.

ADVERTISEMENT

ತುರ್ತು ನೆರವು: ನಗದು ಬಿಕ್ಕಟ್ಟು ಎದುರಾಗದಿರಲು ಬ್ಯಾಂಕ್‌ಗೆ ₹ 60 ಸಾವಿರ ಕೋಟಿ ಮೊತ್ತದ ತುರ್ತು ಸಾಲ ಒದಗಿಸಲು ಆರ್‌ಬಿಐ ಮುಂದಾಗಿದೆ.

ವಿಚಾರಣೆ:ಯೆಸ್‌ ಬ್ಯಾಂಕ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಮುಂಬೈ ಕಚೇರಿಗೆ ಗುರುವಾರ ಹಾಜರಾಗಿದ್ದ ರಿಲಯನ್ಸ್‌ ಸಮೂಹದ ಅಧ್ಯಕ್ಷ ಅನಿಲ್‌ ಅಂಬಾನಿ ಅವರು 9 ಗಂಟೆಗಳ ಕಾಲ ವಿಚಾರಣೆಗೆ ಒಳಗಾದರು. 30ರಂದು ಮತ್ತೆ ವಿಚಾರಣೆಗೆ ಹಾಜರಾಗುವಂತೆ ಇಡಿ ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.