ADVERTISEMENT

ಅಡಿಗಾಸ್‌ ಯಾತ್ರಾ ಪ್ರವಾಸಿ ಕೈಪಿಡಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2025, 14:27 IST
Last Updated 2 ಜನವರಿ 2025, 14:27 IST
ಅಡಿಗಾಸ್‍ ಯಾತ್ರಾ ಸಂಸ್ಥೆಯ 31ನೇ ವರ್ಷದ ಪ್ರವಾಸಿ ಕೈಪಿಡಿಯನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳದಲ್ಲಿ ಬಿಡುಗಡೆ ಮಾಡಿದರು
ಅಡಿಗಾಸ್‍ ಯಾತ್ರಾ ಸಂಸ್ಥೆಯ 31ನೇ ವರ್ಷದ ಪ್ರವಾಸಿ ಕೈಪಿಡಿಯನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳದಲ್ಲಿ ಬಿಡುಗಡೆ ಮಾಡಿದರು   

ಬೆಂಗಳೂರು: ಅಡಿಗಾಸ್‍ ಯಾತ್ರಾ ಸಂಸ್ಥೆಯ 31ನೇ ವರ್ಷದ ‘ಪ್ರವಾಸಿ ಕೈಪಿಡಿ’ಯನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು, ಧರ್ಮಸ್ಥಳದಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಿದರು.

ಈ ವೇಳೆ ಅಡಿಗಾಸ್ ಸಂಸ್ಥೆಯ ಸ್ಥಾಪಕ ನಾಗರಾಜ ಅಡಿಗ, ನಿರ್ದೇಶಕಿ ಆಶಾ ಅಡಿಗ, ಆದಿತ್ಯಾ ಅಡಿಗ, ಧರ್ಮಸ್ಥಳ ಪದವಿಪೂರ್ವ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಪ್ರಸನ್ನಕುಮಾರ್ ಐತಾಳ್, ಅಡಿಗಾಸ್ ಸಂಸ್ಥೆಯ ಆಡಳಿತ ಮಂಡಳಿಯ ನಾಗೇಂದ್ರ ಕೆ.ಎಸ್. ಪ್ರಸನ್ನ ಎಚ್. ಕೆ, ಮಹೇಶ್ ಎಚ್. ಜೆ. ಎಮ್. ರಮೇಶ್, ಶಶಾಂಕ್ ಕುಮಾರ್ ಕೆ, ಎಚ್. ಕೆ. ನರೇಶ್, ಆದಿತ್ಯಾ ಭಟ್ ಇದ್ದರು.

ಅಡಿಗಾಸ್‌ ಸಂಸ್ಥೆಯು 500ಕ್ಕೂ ಹೆಚ್ಚು ವೈವಿಧ್ಯಮಯ ಆಕರ್ಷಕ ಪ್ರವಾಸಿ ಯೋಜನೆಗಳನ್ನು ಜಾರಿಗೊಳಿಸಿದೆ. ದೇಶ ಮತ್ತು ವಿದೇಶಗಳಿಗೆ ಪ್ರವಾಸ ಆಯೋಜಿಸುವ ಮೂಲಕ ಜನರ ಮೆಚ್ಚುಗೆ ಪಡೆದಿದೆ. ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ವಾಸ್ತವ್ಯ, ಐಷಾರಾಮಿ ಬಸ್‌ಗಳಲ್ಲಿ ಪ್ರಯಾಣ, ಸಂಸ್ಥೆಯ ನುರಿತ ಅಡುಗೆ ಸಿಬ್ಬಂದಿಯಿಂದ ಊಟೋಪಚಾರ, ಸ್ಥಳೀಯ ಮಾರ್ಗದರ್ಶಕರನ್ನು ಒದಗಿಸಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.

ADVERTISEMENT

ಸಂಸ್ಥೆಯು ನೇಪಾಳ, ಭೂತಾನ್, ಯುರೋಪ್, ಬ್ರಿಟನ್‌, ಆಸ್ಟ್ರೇಲಿಯಾ, ಜಪಾನ್, ಹಾಂಗ್‌ಕಾಂಗ್- ಮಕಾವು, ವಿಯೆಟ್ನಾಂ, ಬಾಲಿ, ಸಿಂಗಪುರ, ಮಲೇಷ್ಯಾ, ಥಾಯ್ಲೆಂಡ್‌, ದುಬೈ, ಶ್ರೀಲಂಕಾಕ್ಕೆ ಪ್ರವಾಸಗಳನ್ನು ಆಯೋಜಿಸುತ್ತಿದೆ. ಸಾವಿರಾರು ಪ್ರವಾಸಿಗರು ಪ್ರತಿವರ್ಷ ಈ ಪ್ರವಾಸಗಳಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಿದೆ.

ಪ್ರವಾಸಿ ಕೈಪಿಡಿ ಹಾಗೂ ಸಂಸ್ಥೆ ಬಗ್ಗೆ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 080-26616678/ ಮೊಬೈಲ್‌ 9449478944 ಸಂಪರ್ಕಿಸಬಹುದು. www.adigasyatra.com ಮೂಲಕ ಮಾಹಿತಿ ಪಡೆಯಬಹುದು ಎಂದು ಸಂಸ್ಥಾಪಕ ನಾಗರಾಜ್ ಅಡಿಗ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.