
ಪ್ರಜಾವಾಣಿ ವಾರ್ತೆಬೆಂಗಳೂರು: ವಿಮಾನದ ಬಿಡಿಭಾಗಗಳು ಹಾಗೂ ಗ್ರಾಹಕ ಬಳಕೆ ಉಪಕರಣಗಳ ತಯಾರಿಕೆಯಲ್ಲಿ ತೊಡಗಿರುವ ಏಕಸ್ ಲಿಮಿಟೆಡ್‌ನ ಐಪಿಒ ಭಾಗವಾಗಿ ಸಣ್ಣ ಹೂಡಿಕೆದಾರರು ಬಿಡ್ ಸಲ್ಲಿಸಲು ಬುಧವಾರದಿಂದ ಅವಕಾಶ ಇರಲಿದೆ.
ಷೇರು ಬೆಲೆಯನ್ನು ₹118–₹124 ಎಂದು ನಿಗದಿ ಮಾಡಲಾಗಿದೆ. ಸಣ್ಣ ಹೂಡಿಕೆದಾರರು ಕನಿಷ್ಠ 120 ಷೇರುಗಳಿಗೆ ಬಿಡ್ ಸಲ್ಲಿಸಬೇಕು. ಬಿಡ್ ಸಲ್ಲಿಸಲು ಶುಕ್ರವಾರದವರೆಗೆ ಅವಕಾಶ ಇರಲಿದೆ.
ಐಪಿಒ ಮೂಲಕ ಸಂಗ್ರಹ ಆಗುವ ಬಂಡವಾಳವನ್ನು ಕಂಪನಿಯು ತನ್ನ ಸಾಲಗಳನ್ನು ತೀರಿಸಲು ಹೆಚ್ಚಾಗಿ ಬಳಸಲಿದೆ. ಕಂಪನಿಯು ಬೆಳಗಾವಿ, ಕೊಪ್ಪಳ ಮತ್ತು ಹುಬ್ಬಳಿಯಲ್ಲಿ ತಯಾರಿಕಾ ಘಟಕಗಳನ್ನು ಹೊಂದಿದೆ.
ಕಂಪನಿಯು ಏರ್‌ಬಸ್‌ಗೆ ಕೆಲವು ಬಿಡಿಭಾಗಗಳನ್ನು ಬೆಳಗಾವಿಯಿಂದ ಪೂರೈಕೆ ಮಾಡುತ್ತಿದೆ ಎಂದು ಕಂಪನಿಯ ಸಿಇಒ ಅರವಿಂದ ಮೆಳ್ಳಿಗೇರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.