ADVERTISEMENT

₹ 3.82 ಲಕ್ಷ ಕೋಟಿ ಮೌಲ್ಯದ ಕೃಷಿ ಉತ್ಪನ್ನಗಳ ರಫ್ತು: ಕೇಂದ್ರ

ಪಿಟಿಐ
Published 9 ಏಪ್ರಿಲ್ 2022, 18:12 IST
Last Updated 9 ಏಪ್ರಿಲ್ 2022, 18:12 IST

ನವದೆಹಲಿ: ಕೃಷಿ ಉತ್ಪನ್ನಗಳ ರಫ್ತು ಮೌಲ್ಯವು 2021–22ನೇ ಹಣಕಾಸು ವರ್ಷದಲ್ಲಿ ₹ 3.82 ಲಕ್ಷ ಕೋಟಿಗಳಷ್ಟಾಗಿದೆ. ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆಶೇ 20ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಶನಿವಾರ ತಿಳಿಸಿದೆ.

ಕೋವಿಡ್‌ ಸಾಂಕ್ರಾಮಿಕದಿಂದ ಸಾಗಣೆ ವ್ಯವಸ್ಥೆಯು ಬಹಳಷ್ಟು ಸವಾಲು
ಗಳನ್ನು ಎದುರಿಸಿದ ಹೊರತಾಗಿಯೂ ರಫ್ತು ವಹಿವಾಟಿನಲ್ಲಿ ಈ ಪ್ರಮಾಣದ ಬೆಳವಣಿಗೆ ಸಾಧ್ಯವಾಗಿದೆ ಎಂದು ಹೇಳಿದೆ.

ಒಟ್ಟಾರೆ ರಫ್ತಿನಲ್ಲಿ ಅತಿ ಹೆಚ್ಚು ಪಾಲು ಹೊಂದಿರುವ ಅಕ್ಕಿ ರಫ್ತು ಮೌಲ್ಯವು ₹ 73,340 ಕೋಟಿಗಳಷ್ಟು ಆಗಿದೆ. 2020–21ನೇ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ 9.35ರಷ್ಟು ಹೆಚ್ಚಳ ಆಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಗೋಧಿ ರಫ್ತು ₹ 16,720 ಕೋಟಿಗಳಿಗೆ ಏರಿಕೆ ಆಗಿದೆ. ಕುರಿ/ಮೇಕೆ ಮಾಂಸದ ರಫ್ತು ಶೇ 34ರಷ್ಟು ಹೆಚ್ಚಾಗಿದೆ. ಡೈರಿ ಉತ್ಪನ್ನಗಳ ರಫ್ತು ಸಹ ಹೆಚ್ಚಾಗಿದೆ ಎಂದು ಹೇಳಿದೆ.

ಬಾಂಗ್ಲಾದೇಶ, ಯುಎಇ, ವಿಯೆಟ್ನಾಂ, ಅಮೆರಿಕ, ನೇಪಾಳ, ಮಲೇಷ್ಯಾ, ಸೌದಿ ಅರೇಬಿಯಾ, ಇಂಡೋನೇಷ್ಯಾ, ಇರಾನ್‌ ಮತ್ತು ಈಜಿಪ್ಟ್‌ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.