ನವದೆಹಲಿ: ಗೃಹ ಸಾಲ ನೀಡಲು ಏಷ್ಯನ್ ಇನ್‌ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್‌ನಿಂದ (ಎಐಐಬಿ) ₹858 ಕೋಟಿ ಸಾಲ ಪಡೆದುಕೊಳ್ಳಲಾಗಿದೆ ಎಂದು ಐಐಎಫ್‌ಎಲ್ ಹೋಂ ಫೈನಾನ್ಸ್ ಶನಿವಾರ ತಿಳಿಸಿದೆ.
ಆರ್ಥಿಕವಾಗಿ ಹಿಂದುಳಿದವರು ಮತ್ತು ಕಡಿಮೆ ಆದಾಯ ಹೊಂದಿದವರಿಗೆ ಗೃಹ ಸಾಲ ಕೈಗೆಟುಕುವಂತೆ ಮಾಡಲು ಈ ಪಾಲುದಾರಿಕೆ ಮಾಡಿಕೊಳ್ಳಲಾಗಿದೆ. ಈ ಸಾಲದ ನೆರವಿನಿಂದ ಗ್ರಾಹಕರು ಸ್ವಂತ ಮನೆ ಹೊಂದಬಹುದಾಗಿದೆ ಎಂದು ತಿಳಿಸಿದೆ. ದೇಶದ 18 ರಾಜ್ಯಗಳಲ್ಲಿ 376 ಶಾಖೆಗಳನ್ನು ಐಐಎಫ್‌ಎಲ್ ಹೋಂ ಫೈನಾನ್ಸ್ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.