ADVERTISEMENT

ಏರ್‌ ಇಂಡಿಯಾ ವಿಮಾನದ ಟಿಕೆಟ್‌ ಬುಕಿಂಗ್‌ನಲ್ಲಿ ಕುಸಿತ

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 14:40 IST
Last Updated 20 ಜೂನ್ 2025, 14:40 IST
ಏರ್‌ ಇಂಡಿಯಾ
ಏರ್‌ ಇಂಡಿಯಾ   

ನವದೆಹಲಿ: ಏರ್‌ ಇಂಡಿಯಾ ವಿಮಾನ ದುರಂತದ ಬಳಿಕ, ಕಂಪನಿಯ ವಿಮಾನದ ಟಿಕೆಟ್‌ ಬುಕಿಂಗ್‌ನಲ್ಲಿ ಅಂದಾಜು ಶೇ 20ರಷ್ಟು ಕುಸಿತವಾಗಿದೆ. ಅಲ್ಲದೆ, ಸರಾಸರಿ ಟಿಕೆಟ್‌ ದರವು ಶೇ 8ರಿಂದ ಶೇ 15ರಷ್ಟು ಕಡಿಮೆಯಾಗಿದೆ ಎಂದು ಭಾರತೀಯ ಪ್ರವಾಸ ನಿರ್ವಾಹಕರ ಸಂಘದ (ಐಎಟಿಒ) ಅಧ್ಯಕ್ಷ ರವಿ ಗೋಸೈನ್‌ ಶುಕ್ರವಾರ ಹೇಳಿದ್ದಾರೆ.

ವಿಮಾನ ಅಪಘಾತದ ನಂತರ ಅಂತರರಾಷ್ಟ್ರೀಯ ಮಾರ್ಗದ ಟಿಕೆಟ್‌ ಬುಕಿಂಗ್‌ನಲ್ಲಿ ಅಂದಾಜಿನ ಪ್ರಕಾರ ಶೇ 18ರಿಂದ ಶೇ 22ರಷ್ಟು ಕಡಿಮೆಯಾಗಿದೆ. ದೇಶೀಯ ಮಾರ್ಗದಲ್ಲಿ ಶೇ 10ರಿಂದ ಶೇ 12ರಷ್ಟು ಇಳಿಕೆಯಾಗಿದೆ. ಆದರೆ, ಈ ಇಳಿಕೆಯು ಅಲ್ಪಾವಧಿಯವರೆಗೆ ಮಾತ್ರ ಇರಲಿದೆ ಎಂದು ಹೇಳಿದ್ದಾರೆ.

ಪ್ರವಾಸ ನಿರ್ವಾಹಕರ ಮೂಲಕ ಟಿಕೆಟ್‌ ಬುಕ್ ಮಾಡಿದ ಏರ್ ಇಂಡಿಯಾ ವಿಮಾನಗಳ ಪ್ರಯಾಣಿಕರಲ್ಲಿ ಕೆಲವು ಪ್ರಯಾಣಿಕರು ಏರ್‌ ಇಂಡಿಯಾದ ಟಿಕೆಟ್‌ ರದ್ದು ಮಾಡಿ, ಬೇರೆ ವಿಮಾನ ಕಂಪನಿಯ ಟಿಕೆಟ್‌ ನೀಡುವಂತೆ ಕೋರುತ್ತಿದ್ದಾರೆ. ಈ ಪ್ರಮಾಣ ಅಂತರರಾಷ್ಟ್ರೀಯ ಮಾರ್ಗದಲ್ಲಿ ಶೇ 15ರಿಂದ ಶೇ 18ರಷ್ಟಿದ್ದರೆ, ದೇಶೀಯ ಮಾರ್ಗದಲ್ಲಿ ಶೇ 8ರಿಂದ ಶೇ 10ರಷ್ಟಿದೆ. ಆದರೆ, ಮುಂದಿನ ದಿನಗಳಲ್ಲಿ ಇದು ಸಹಜ ಸ್ಥಿತಿಗೆ ಬರುವ ನಿರೀಕ್ಷೆ ಇದೆ. ಏರ್‌ ಇಂಡಿಯಾ ಪ್ರಮುಖ ಮಾರ್ಗಗಳಲ್ಲಿ ದರವನ್ನು ಈಗಾಗಲೇ ಇಳಿಕೆ ಮಾಡಿದೆ ಎಂದು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.