ADVERTISEMENT

ಏರ್ ಇಂಡಿಯಾದಿಂದ ಹೊಸ ವಿಮಾನಗಳ ಖರೀದಿ ಅಂತಿಮ: ಸಿಇಒ ಕ್ಯಾಂಪ್‌ಬೆಲ್

ಪಿಟಿಐ
Published 27 ಜನವರಿ 2023, 6:44 IST
Last Updated 27 ಜನವರಿ 2023, 6:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಏರ್ ಇಂಡಿಯಾ ಕಂಪನಿಯನ್ನು ಟಾಟಾ ಸಮೂಹ ಖರೀದಿಸಿ ಒಂದು ವರ್ಷ ಪೂರ್ಣಗೊಂಡಿದೆ. ಈ ಸಂಬಂಧ ಹೇಳಿಕೆ ನೀಡಿರುವ ಏರ್‌ ಇಂಡಿಯಾ ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್, ಹೊಸ ವಿಮಾನಗಳ ಖರೀದಿಗೆ ಕಾರ್ಯಾದೇಶ ಅಂತಿಮಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಭವಿಷ್ಯದ ಪ್ರಗತಿಗೆ ಉತ್ತೇಜನ ನೀಡಲು ಹೊಸ ವಿಮಾನಗಳ ಖರೀದಿಗೆ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ ಎಂದು ಅವರು ತಿಳಿಸಿದರು.

ಟಾಟಾ ಸಮೂಹದ ಖರೀದಿಯ ಬಳಿಕ ಎರಡನೇ ವರ್ಷಕ್ಕೆ ಕಾಲಿಟ್ಟಿರುವ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ನೌಕರರನ್ನು ಉದ್ದೇಶಿಸಿ ಮಾತನಾಡಿದ ಅವರು, ನಿರಂತರ ಸವಾಲುಗಳ ಮಧ್ಯೆಯೂ ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದೇವೆ ಎಂದು ಹೇಳಿದ್ದಾರೆ.

ಹಾಗಿದ್ದರೂ ಏರ್ ಇಂಡಿಯಾ ವಿಮಾನದಲ್ಲಿ ಮಹಿಳಾ ಯಾತ್ರಿ ಮೇಲೆ ಮೂತ್ರ ವಿಸರ್ಜಿಸಿದ್ದ ಘಟನೆ ಸಂಸ್ಥೆಗೆ ಮುಖಭಂಗಕ್ಕೀಡು ಮಾಡಿತ್ತು.

ಕಳೆದ ವರ್ಷ ಜನವರಿ 27ರಂದು ಏರ್ ಇಂಡಿಯಾ ಸಂಸ್ಥೆಯನ್ನು ಟಾಟಾ ಸಮೂಹವು ತನ್ನ ತೆಕ್ಕೆಗೆ ಸೇರಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.