ADVERTISEMENT

ಏರ್‌ ಇಂಡಿಯಾದಿಂದ 840 ವಿಮಾನಗಳ ಖರೀದಿಗೆ ಒಪ್ಪಂದ

ಪಿಟಿಐ
Published 16 ಫೆಬ್ರುವರಿ 2023, 15:16 IST
Last Updated 16 ಫೆಬ್ರುವರಿ 2023, 15:16 IST
   

ನವದೆಹಲಿ: ಟಾಟಾ ಸಮೂಹದ ಒಡೆತನದ ಏರ್ ಇಂಡಿಯಾ ಕಂಪನಿಯು ಏರ್‌ಬಸ್‌ ಹಾಗೂ ಬೋಯಿಂಗ್‌ ಕಂಪನಿಗಳಿಂದ ಒಟ್ಟು 840 ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದರಲ್ಲಿ 470 ವಿಮಾನಗಳನ್ನು ಏರ್‌ ಇಂಡಿಯಾ ಖರೀದಿ ಮಾಡುವುದು ಖಚಿತ. ಇನ್ನುಳಿದ 370 ವಿಮಾನಗಳ ಖರೀದಿಯನ್ನು ಕಂಪನಿಯು ಒಂದು ಆಯ್ಕೆಯನ್ನಾಗಿ ಇರಿಸಿಕೊಂಡಿದೆ. ಏರ್ ಇಂಡಿಯಾ ಕಂಪನಿಯು ಏರ್‌ಬಸ್‌ನಿಂದ 250 ವಿಮಾನಗಳನ್ನು ಹಾಗೂ ಬೋಯಿಂಗ್‌ನಿಂದ 220 ವಿಮಾನಗಳನ್ನು ಖರೀದಿಸುವುದು ಖಚಿತವಾಗಿದೆ.

‘370 ವಿಮಾನಗಳ ಖರೀದಿಯು ಒಂದು ಆಯ್ಕೆಯಾಗಿ ಇದೆ’ ಎಂದು ಕಂಪನಿಯ ಮುಖ್ಯ ವಾಣಿಜ್ಯ ಮತ್ತು ಪರಿವರ್ತನೆ ಅಧಿಕಾರಿ ನಿಪುಣ್ ಅಗರ್ವಾಲ್ ಹೇಳಿದ್ದಾರೆ.

ADVERTISEMENT

ಏರ್ ಇಂಡಿಯಾ ಕಂಪನಿಯು ಕಡೆಯ ಬಾರಿ ವಿಮಾನ ಖರೀದಿ ಒಪ್ಪಂದ ಮಾಡಿಕೊಂಡಿದ್ದು 2005ರಲ್ಲಿ. ಆಗ ಕಂಪನಿಯು ಸರ್ಕಾರದ ಅಧೀನದಲ್ಲಿತ್ತು. ಆ ಸಂದರ್ಭದಲ್ಲಿ ಅದು 111 ವಿಮಾನಗಳನ್ನು (ಬೋಯಿಂಗ್‌ನಿಂದ 68 ಹಾಗೂ ಏರ್‌ಬಸ್‌ನಿಂದ 43) ಖರೀದಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.