ADVERTISEMENT

ಶೇ 30ರಷ್ಟು ಮಾರುಕಟ್ಟೆ ಪಾಲು: ಏರ್‌ ಇಂಡಿಯಾ ಗುರಿ

ಪಿಟಿಐ
Published 15 ಸೆಪ್ಟೆಂಬರ್ 2022, 13:41 IST
Last Updated 15 ಸೆಪ್ಟೆಂಬರ್ 2022, 13:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಟಾಟಾ ಸಮೂಹದ ಒಡೆತನದಲ್ಲಿರುವ ಏರ್‌ ಇಂಡಿಯಾ ವಿಮಾನಯಾನ ಕಂಪನಿಯು ಮುಂದಿನ ಐದು ವರ್ಷಗಳಲ್ಲಿ ದೇಶಿ ಮಾರುಕಟ್ಟೆಯಲ್ಲಿ ಶೇಕಡ 30ರಷ್ಟು ಪಾಲು ಹೊಂದುವ ಗುರಿ ಇಟ್ಟುಕೊಂಡಿದೆ.

ತನ್ನ ಸಿಬ್ಬಂದಿಯಿಂದ ಪ್ರತಿಕ್ರಿಯೆಗಳನ್ನು ಪಡೆದ ಬಳಿಕ ಕಂಪನಿಯು ‘ವಿಹಾನ್‌.ಎಐ’ (Vihaan.AI) ಎನ್ನುವ ಐದು ವರ್ಷಗಳ ಕಾರ್ಯಯೋಜನೆಯನ್ನು ಗುರುವಾರ ಘೋಷಿಸಿದೆ. ಅದರಂತೆ, ಅಂತರರಾಷ್ಟ್ರೀಯ ಕಾರ್ಯಾಚರಣೆಯನ್ನು ಇನ್ನಷ್ಟು ಬಲಪಡಿಸಲು ಸಹ ಗಮನ ಹರಿಸಲಿದೆ.

ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (ಡಿಜಿಸಿಎ) ಈಚಿನ ವರದಿಯ ಪ್ರಕಾರ, ಜುಲೈನಲ್ಲಿ ಏರ್‌ ಇಂಡಿಯಾದ ದೇಶಿ ಮಾರುಕಟ್ಟೆ ಪಾಲು ಶೇ 8.4ರಷ್ಟು ಇತ್ತು.

ADVERTISEMENT

ವಿಶ್ವಾಸಾರ್ಹತೆ ಕಾಯ್ದುಕೊಳ್ಳುವುದು, ಸಮಯಕ್ಕೆ ಸರಿಯಾಗಿ ವಿಮಾನಗಳ ಕಾರ್ಯಾಚರಣೆ ಇರುವಂತೆ ಮಾಡುವುದು, ತಂತ್ರಜ್ಞಾನ, ನಾವೀನ್ಯದಲ್ಲಿ ನಾಯಕತ್ವದ ಸ್ಥಾನ ಹೊಂದುವುದು, ಉದ್ಯಮದ ಉತ್ತಮ ಪ್ರತಿಭೆಗಳ ಮೇಲೆ ಹೆಚ್ಚಿನ ಹೂಡಿಕೆ ಮಾಡುವುದು ಸೇರಿದಂತೆ ಹಲವು ಅಂಶಗಳ ಬಗ್ಗೆ ಗಮನ ಹರಿಸಲು ಯೋಜನೆ ರೂಪಿಸಲಾಗಿದೆ ಎಂದು ಅದು ತಿಳಿಸಿದೆ.

ಕ್ಯಾಬಿನ್‌ಗಳ ನವೀಕರಣ, ವಿಮಾನದಲ್ಲಿ ಮನರಂಜನಾ ವ್ಯವಸ್ಥೆ ಅಳವಡಿಕೆ... ಹೀಗೆ ಕೆಲವು ಕೆಲಸಗಳನ್ನು ಈಗಾಗಲೇ ಆರಂಭಿಸಲಾಗಿದೆ ಎಂದು ಏರ್‌ ಇಂಡಿಯಾ ಸಿಇಒ ಕ್ಯಾಂಪ್‌ಬೆಲ್‌ ವಿಲ್ಸನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.