ನವದೆಹಲಿ: ಪಾಕಿಸ್ತಾನವು ತನ್ನ ವಾಯುಪ್ರದೇಶದಲ್ಲಿ ಭಾರತದ ವಿಮಾನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿದೆ. ಇದರಿಂದ ಅಂತರರಾಷ್ಟ್ರೀಯ ವಿಮಾನ ಪ್ರಯಾಣದಲ್ಲಿ ತೊಂದರೆಯಾಗುವ ಸಾಧ್ಯತೆಯಿದೆ. ಈ ಬಗ್ಗೆ ಪ್ರಯಾಣಿಕರಿಗೆ ವಿಮಾನಯಾನ ಕಂಪನಿಗಳು ಮಾಹಿತಿ ನೀಡಬೇಕಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ನಿರ್ದೇಶನ ನೀಡಿದೆ.
ಜೊತೆಗೆ, ನಿಗದಿತ ಸ್ಥಳಗಳಿಗೆ ವಿಮಾನಗಳ ಹಾರಾಟವು ದೀರ್ಘ ಸಮಯ ಹಿಡಿಯಲಿದೆ. ಇದರಿಂದ ವಿಮಾನಗಳಲ್ಲಿ ಪ್ರಯಾಣಿಕರಿಗೆ ಆಹಾರ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಮುಂಜಾಗ್ರತೆವಹಿಸಬೇಕಿದೆ ಎಂದು ಸೂಚಿಸಿದೆ.
ಪ್ರಯಾಣಿಕರಿಗೆ ವೈದ್ಯಕೀಯ ಸೇವೆಯಲ್ಲೂ ತೊಂದರೆಯಾಗಬಾರದು. ಗ್ರಾಹಕರ ಸೇವೆಯಲ್ಲಿ ಲೋಪವಾಗಬಾರದು. ಸಂಬಂಧಪಟ್ಟ ಇಲಾಖೆಗಳ ನಡುವೆ ಸಮನ್ವಯದಿಂದ ಕೆಲಸ ನಿರ್ವಹಿಸಬೇಕಿದೆ ಎಂದು ಹೇಳಿದೆ.
ಪ್ರಯಾಣಿಕರಿಗೆ ಪ್ರಯಾಣ ಮಾರ್ಗ ಕುರಿತು ಸ್ಪಷ್ಟ ಮಾಹಿತಿ ನೀಡಬೇಕು. ನಿಗದಿತ ಸ್ಥಳ ತಲುಪಲು ಎಷ್ಟು ಸಮಯ ಹಿಡಿಯಲಿದೆ ಎಂಬ ಬಗ್ಗೆಯೂ ತಿಳಿಸಬೇಕಿದೆ. ತಾಂತ್ರಿಕ ನಿಲುಗಡೆ ಮಾಡುವ ನಿಲ್ದಾಣಗಳ ಕುರಿತು ಮಾಹಿತಿ ನೀಡಬೇಕಿದೆ. ಚೆಕ್‌ಇನ್, ಬೋರ್ಡಿಂಗ್ ದ್ವಾರ ಬಳಿ ಅಥವಾ ಎಸ್‌ಎಂಎಸ್, ಇ–ಮೇಲ್ ಮೂಲಕ ಮಾಹಿತಿಯನ್ನು ರವಾನಿಸಬೇಕಿದೆ ಎಂದು ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.