ADVERTISEMENT

ಸೆ. 25ರವರೆಗೆ ಅಜಿಯೊ ಮಾರಾಟ ಮೇಳ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2022, 16:44 IST
Last Updated 16 ಸೆಪ್ಟೆಂಬರ್ 2022, 16:44 IST

ಬೆಂಗಳೂರು: ರಿಲಯನ್ಸ್ ಸಮೂಹಕ್ಕೆ ಸೇರಿರುವ, ದೇಶದ ಪ್ರಮುಖ ಆನ್‌ಲೈನ್ ಫ್ಯಾಷನ್ ಇ-ರಿಟೇಲರ್ ಪೈಕಿ ಒಂದಾಗಿರುವ ‘ಅಜಿಯೊ’ ಸೆಪ್ಟೆಂಬರ್ 16ರಿಂದ 25ರವರೆಗೆ ‘ಆಲ್ ಸ್ಟಾರ್ಸ್ ಸೇಲ್’ ಮಾರಾಟ ಮೇಳ ಆಯೋಜಿಸಿದೆ.

ಮೂರೂವರೆ ಸಾವಿರಕ್ಕೂ ಹೆಚ್ಚಿನ ದೇಶಿ ಹಾಗೂ ವಿದೇಶಿ ಫ್ಯಾಷನ್ ಬ್ರ್ಯಾಂಡ್‌ಗಳು ಮಾರಾಟ ಮೇಳದಲ್ಲಿ ಲಭ್ಯವಿರಲಿವೆ ಎಂದು ಪ್ರಕಟಣೆ ತಿಳಿಸಿದೆ. ಇದರಲ್ಲಿ ಗರಿಷ್ಠ ಶೇಕಡ 90ರವರೆಗೆ ರಿಯಾಯಿತಿ ಇರಲಿದೆ. ಮೊದಲ ಬಾರಿಗೆ ಆ್ಯಪ್‌ಗೆ ಸೈನ್ ಅಪ್ ಮಾಡಿಕೊಂಡಾಗ ಗ್ರಾಹಕರಿಗೆ ರಿಯಾಯಿತಿ ಕೊಡುಗೆ ದೊರೆಯುತ್ತದೆ.

ಪಾಶ್ಚಾತ್ಯ ಉಡುಗೆಗಳು, ಡೆನಿಮ್‌ಗಳು, ಸ್ನೀಕರ್‌ಗಳು, ಅಥ್ಲೀಶರ್, ಎಥ್ಲೀಶರ್, ಸಾಂಪ್ರಾದಾಯಿಕ ಉಡುಗೆ ಮೇಳದಲ್ಲಿ ಸಿಗಲಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.