ADVERTISEMENT

‌ಬಾಕಿ ಇರುವ ಎಲ್ಲಾ ಜಿಎಸ್‌ಟಿ ಪರಿಹಾರ ಮೊತ್ತ ಪಾವತಿ: ನಿರ್ಮಲಾ ಸೀತಾರಾಮನ್

49ನೇ ಜಿಎಸ್‌ಟಿ ಸಭೆಯ ಬಳಿಕ ಅವರು ಈ ಘೋಷಣೆ ಮಾಡಿದ್ದಾರೆ.

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2023, 16:54 IST
Last Updated 18 ಫೆಬ್ರುವರಿ 2023, 16:54 IST
   

ನವದೆಹಲಿ: ಜೂನ್‌ ತಿಂಗಳ ₹ 16,982 ಕೋಟಿ ಸೇರಿ ಬಾಕಿ ಇರುವ ಎಲ್ಲ ಜಿಎಸ್‌ಟಿ ಪರಿಹಾರ ಮೊತ್ತವನ್ನು ಶನಿವಾರದೊಳಗೆ (ಫೆ.19) ರ ಒಳಗಾಗಿ ಪಾವತಿ ಮಾಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಸದ್ಯ ಪರಿಹಾರ ನಿಧಿಯಲ್ಲಿ ಹಣ ಇಲ್ಲದೇ ಇದ್ದರೂ ಕೂಡ, ಕೇಂದ್ರ ಸರ್ಕಾರ ತನ್ನ ಸ್ವಂತ ಮೂಲದಿಂದ ಹಣ ಬಿಡುಗಡೆ ಮಾಡಲಿದೆ ಎಂದು ಅವರು ಹೇಳಿದ್ದಾರೆ.

ಇಲ್ಲಿ ನಡೆದ 49ನೇ ಜಿಎಸ್‌ಟಿ ಸಭೆಯ ಬಳಿಕ ಅವರು ಈ ಘೋಷಣೆ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.