ADVERTISEMENT

ದೇಶದಾದ್ಯಂತ 1.5 ಲಕ್ಷ ಋತು ಆಧಾರಿತ ಉದ್ಯೋಗಾವಕಾಶ ಸೃಷ್ಟಿಸಿದ ಅಮೆಜಾನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಆಗಸ್ಟ್ 2025, 13:19 IST
Last Updated 20 ಆಗಸ್ಟ್ 2025, 13:19 IST
<div class="paragraphs"><p>ಅಮೆಜಾನ್ </p></div>

ಅಮೆಜಾನ್

   

–ರಾಯಿಟರ್ಸ್ ಚಿತ್ರ

ಬೆಂಗಳೂರು: ಹಬ್ಬದ ಋತು ಹತ್ತಿರವಾಗುತ್ತಿದ್ದಂತೆ ದೇಶದಾದ್ಯಂತ 1.5 ಲಕ್ಷ ಋತು ಆಧಾರಿತ ಉದ್ಯೋಗಾವಕಾಶಗಳನ್ನು ಅಮೆಜಾನ್‌ ಕಂಪನಿ ಸೃಷ್ಟಿಸಿದೆ. ಭಾರತದಾದ್ಯಂತ ಋತು ಆಧಾರಿತ ಉದ್ಯೋಗಾವಕಾಶಗಳನ್ನು 400ಕ್ಕೂ ಹೆಚ್ಚು ನಗರಗಳಲ್ಲಿ ಕಲ್ಪಿಸಲಾಗಿದೆ.

ADVERTISEMENT

ಇದರಲ್ಲಿ ಸಾವಿರಾರು ಮಹಿಳೆಯರು ಹಾಗೂ 2,000ಕ್ಕೂ ಹೆಚ್ಚು ವಿಶೇಷ ಚೇತನ ಅಸೋಸಿಯೇಟ್‌ಗಳು ಸೇರ್ಪಡೆಯಾಗಿದೆ. ಅಮೆಜಾನ್ ಇಂಡಿಯಾ ಮುಂದಿನ ಹಬ್ಬದ ಋತುವಿಗಾಗಿ ಕೋಟ್ಯಂತರ ಗ್ರಾಹಕರಿಗೆ ಸೇವೆ ಒದಗಿಸಲು ಸಜ್ಜಾಗಿದ್ದು ಈ ಹಿನ್ನೆಲೆಯಲ್ಲಿ ಇಂದು ತನ್ನ ಫುಲ್ ಫಿಲ್ಮೆಂಟ್ ಸೆಂಟರ್‌ಗಳು(ಎಫ್‌ಸಿ), ಸಾರ್ಟ್ ಸೆಂಟರ್‌ಗಳು ಹಾಗೂ ಕೊನೆಯ ಹಂತದ ಡೆಲಿವರಿ ಸ್ಟೇಷನ್‌ಗಳಲ್ಲಿ ಕಾರ್ಯನಿರ್ವಹಿಸಲು 1.5 ಲಕ್ಷಕ್ಕೂ ಹೆಚ್ಚು ಋತು ಆಧಾರಿತ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ದೇಶದಾದ್ಯಂತ 400ಕ್ಕೂ ನಗರಗಳಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಸಿದ್ದು ಮುಂಬೈ, ದೆಹಲಿ, ಪುಣೆ, ಬೆಂಗಳೂರು, ಹೈದರಾಬಾದ್, ಲಖನೌ, ಕೊಚ್ಚಿ, ಕೊಯಮತ್ತೂರು, ಇಂದೋರ್, ರಾಯಪುರ, ಜಲಂಧರ್, ಜೋಧ್‌ಪುರ, ರಾಂಚಿ, ಅನಂತ್ ನಾಗ್, ಜಲಗಾಂವ್ ಮುಂತಾದ ನಗರಗಳು ಒಳಗೊಂಡಿದೆ.

ವಿಶೇಷವೆಂದರೆ ಸಾವಿರಾರು ಮಹಿಳಾ ಅಸೋಸಿಯೇಟ್‌ಗಳಿಗೆ ಹಾಗೂ 2000ಕ್ಕೂ ಅಧಿಕ ಪಿಡಬ್ಲ್ಯೂಡಿಗಳಿಗೆ (ವಿಶೇಷ ಚೇತನರು) ಅಮೆಜಾನ್ ಅವಕಾಶಗಳನ್ನು ಸೃಷ್ಟಿಸಿದೆ. ಅಮೆಜಾನ್ ಇಂಡಿಯಾ ಈಗಾಗಲೇ ಮುಂದಿನ ಹಬ್ಬದ ಋತುವಿಗೆ ಸಿದ್ಧತೆಯಾಗಿ ಈಗಾಗಲೇ ಬಹುತೇಕ ಜನರನ್ನು ನೇಮಕ ಮಾಡಿಕೊಂಡಿದೆ.

ಅಮೆಜಾನ್‌ ಕಂಪನಿಯ ಉದ್ಯೋಗಿಗಳಿಗೆ ಉತ್ತಮ ಮೂಲಸೌಕರ್ಯ, ವೈದ್ಯಕೀಯ ಸೌಲಭ್ಯಗಳು, ವಾತಾವರಣದ ಪ್ರತಿಕೂಲ ಸಂದರ್ಭದಲ್ಲಿ ಸುರಕ್ಷತೆ, ಹಣಕಾಸು ಸೌಲಭ್ಯ, ವಾರದ 5 ದಿನಗಳು ಮಾತ್ರ ಕೆಲಸ, ಸಾಮಾಜಿಕ ಭಧ್ರತೆ, ಅಪಘಾತ ವಿಮೆ ಸೇರಿದಂತೆ ಉತ್ತಮ ಕೆಲಸದ ವಾತಾವರಣ ಒದಗಿಸಲಾಗುವುದು ಎಂದು ಕಂಪನಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.