ADVERTISEMENT

ಅನಂತ್ ಅಂಬಾನಿ -ರಾಧಿಕಾ ಮರ್ಚೆಂಟ್ ಮದುವೆ: ವಿವಾಹ ಕಾರ್ಯಕ್ರಮಕ್ಕೆ ಭರದ ಸಿದ್ಧತೆ

ಏಜೆನ್ಸೀಸ್
Published 25 ಫೆಬ್ರುವರಿ 2024, 13:05 IST
Last Updated 25 ಫೆಬ್ರುವರಿ 2024, 13:05 IST
<div class="paragraphs"><p>ಮೊಟಿಖ್ ವಾಡಿಯಲ್ಲಿ ದೇವಾಲಯ</p></div>

ಮೊಟಿಖ್ ವಾಡಿಯಲ್ಲಿ ದೇವಾಲಯ

   

ಗಾಂಧಿನಗರ: ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ದಂಪತಿಯ ಮಗ ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಕಾರ್ಯಕ್ರಮಕ್ಕೆ ಅದ್ಧೂರಿ ತಯಾರಿ ನಡೆಯುತ್ತಿದೆ.

ಸ್ವತಃ ನೀತಾ ಅಂಬಾನಿ ಅವರು ಈ ಸಿದ್ಧತೆಯ ಉಸ್ತುವಾರಿಗಳನ್ನು ನೋಡಿಕೊಳ್ಳುತ್ತಿದ್ದಾರೆ. ಅಂಬಾನಿ ಕುಟುಂಬದಿಂದ ಗುಜರಾತ್‌ನ ಜಾಮ್ ನಗರದಲ್ಲಿ ಹದಿನಾಲ್ಕು ಹೊಸ ದೇಗುಲಗಳ ಸಮುಚ್ಚಯದ ನಿರ್ಮಾಣವನ್ನೇ ಮಾಡಲಾಗಿದೆ. ಸೊಗಸಾಗಿ ಕೆತ್ತನೆ ಮಾಡಿದ ಸ್ಥಂಭಗಳು, ಕಲಾಕೃತಿಗಳು, ದೇವ- ದೇವತೆಗಳ ಚಿತ್ರಗಳು, ಮನಮೋಹಕವಾದ ಶಿಲ್ಪಗಳು, ವಾಸ್ತುಶಿಲ್ಪದಿಂದ ಪ್ರೇರಿತವಾದ ಪಾರಂಪರಿಕ ಚಿತ್ರಗಳನ್ನು ಇಲ್ಲಿ ಕಾಣಬಹುದಾಗಿದೆ.

ADVERTISEMENT

ಭಾರತದ ಶ್ರೀಮಂತ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಅಸ್ಮಿತೆಯನ್ನು ಈ ದೇವಾಲಯ ಸಮುಚ್ಚಯದ ಎಲ್ಲ ಕಡೆಗಳಲ್ಲಿ ಕಾಣಬಹುದಾಗಿದೆ. ಪರಿಣಿತರಾದ ಕುಶಲಕರ್ಮಿಗಳು, ಕಲಾವಿದರು ಇದಕ್ಕಾಗಿ ಶ್ರಮಿಸಿದ್ದಾರೆ, ಶ್ರಮಿಸುತ್ತಿದ್ದಾರೆ. ದೇವಾಲಯದ ಕಲಾತ್ಮಕತೆಯನ್ನು ಇನ್ನಷ್ಟು ಸೊಬಗುಗೊಳಿಸುವ ಉದ್ದೇಶದಿಂದ ಸಾಂಪ್ರದಾಯಿಕ ಹಾಗೂ ಹಳೆಯ ತಂತ್ರಗಳನ್ನು ಬಳಸಲಾಗಿದೆ. ಸ್ಥಳೀಯ ಕಲಾವಿದರ ಅದ್ಭುತ ಕೌಶಲ, ಪ್ರತಿಭೆಯನ್ನು ಈ ದೇವಾಲಯ ಸಮುಚ್ಚಯದಲ್ಲಿನ ಕಲಾ ಶ್ರೀಮಂತಿಕೆ ಪ್ರತಿಬಿಂಬಿಸುತ್ತದೆ. ಅದು ಈಗಾಗಲೇ ಗೊತ್ತಿರುವಂತೆ, ರಿಲಯನ್ಸ್ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷೆಯೂ ಆಗಿರುವ ನೀತಾ ಅಂಬಾನಿ ಅವರ ದೃಷ್ಟಿಕೋನವೇ ಸ್ಥಳೀಯ ಕಲಾವಿದರಿಗೆ ಉತ್ತೇಜನ, ಪ್ರೋತ್ಸಾಹ ಹಾಗೂ ಅವರ ಜೀವನೋಪಾಯಕ್ಕೆ ಸೂಕ್ತ ಅನುಕೂಲ ಮಾಡಿಕೊಡುವುದಾಗಿದೆ. ಅದರ ಜತೆಗೆ ಭಾರತೀಯ ಪರಂಪರೆ, ಸಂಪ್ರದಾಯ ಹಾಗೂ ಸಂಸ್ಕೃತಿಯನ್ನು ಕಾಪಾಡುವುದು ಹಾಗೂ ಪ್ರಚಾರ ಮಾಡುವುದಾಗಿದೆ.ಇಲ್ಲಿ ಆಗುತ್ತಿರುವ ಕೆಲಸಗಳು ಅವರ ದೃಷ್ಟಿಕೋನಕ್ಕೆ ಪೂರಕವಾಗಿದೆ.

ಜಾಮ್ ನಗರದ ಮೊಟಿಖ್ ವಾಡಿಯಲ್ಲಿ ದೇವಾಲಯದ ಸಮುಚ್ಚಯ ಇದ್ದು, ಇಲ್ಲಿಗೆ ಭೇಟಿ ನೀಡಿದಂಥ ನೀತಾ ಅಂಬಾನಿ ಅವರು ಕೆಲಸಗಳ ಪ್ರಗತಿಯನ್ನು ವೀಕ್ಷಿಸಿದರು, ಕಲಾವಿದರ ಕೆಲಸವನ್ನು ಮನಸಾರೆ ಹೊಗಳಿದರು ಹಾಗೂ ಸಣ್ಣ- ಸಣ್ಣ ವಿವರಗಳನ್ನು ಸಹ ಕಲಾಕೃತಿಯಲ್ಲಿ ಮೂಡಿಸಿರುವುದಕ್ಕೆ ಭಾರೀ ಸಂತಸಪಟ್ಟರು. “ಈ ಮದುವೆ ಹಬ್ಬದಲ್ಲಿ ತಾವು ಪ್ರತಿಯೊಬ್ಬರೂ ಭಾಗೀ ಆದಂಥ ಅನುಭವ ತಮಗೆ ಆಗುತ್ತಿದೆ,” ಎಂಬುದನ್ನೆ ಇಲ್ಲಿನ ಸ್ಥಳೀಯರು ಹಾಗೂ ಕಲಾವಿದರು ದೇಗುಲ ಸಮುಚ್ಚಯದಲ್ಲಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.