
ವಿಶಾಖಪಟ್ಟಣ: ಕ್ವಾಂಟಮ್ ಕಂಪ್ಯೂಟಿಂಗ್ ತರಬೇತಿ ನೀಡಲು ಮೂರು ಸಂಸ್ಥೆಗಳ ಜೊತೆಗೆ ಆಂಧ್ರ ಪ್ರದೇಶದ ಕೌಶಲ ಅಭಿವೃದ್ಧಿ ನಿಗಮವು ಒಪ್ಪಂದ ಮಾಡಿಕೊಂಡಿದೆ.
ವಾಷಿಂಗ್ಟನ್‌ನ ಇನ್‌ಸ್ಟಿಟ್ಯೂಟ್ ಫಾರ್ ಎಸ್‌ಟಿಇಎಂ, ಆಂತ್ರಪ್ರೂನರ್ಷಿಪ್ ಆ್ಯಂಡ್ ರಿಸರ್ಚ್ (ಡಬ್ಲ್ಯುಐಎಸ್‌ಇಆರ್), ಕ್ಯುಬಿಟೆಕ್ ಸ್ಮಾರ್ಟ್ ಸಲ್ಯೂಷನ್ಸ್ ಮತ್ತು ಕ್ಯುಕೃಷಿ ಕ್ವಾಂಟಂಮ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಒಪ್ಪಂದದಿಂದ ರಾಜ್ಯದಲ್ಲಿ ಕ್ವಾಂಟಮ್ ತಂತ್ರಜ್ಞಾನ ಬಲಪಡಿಸಲು ನೆರವಾಗಲಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಶನಿವಾರ ಹೇಳಿದ್ದಾರೆ.
ಕ್ವಾಂಟಮ್ ತಂತ್ರಜ್ಞಾನದಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸಿರುವ ಆಂಧ್ರಪ್ರದೇಶದ ಪ್ರತಿಭಾನ್ವಿತ ಯುವಜನರಿಗೆ, ಈ ಒಪ್ಪಂದದಿಂದ ಜಾಗತಿಕ ಗುಣಮಟ್ಟದ ಕ್ವಾಂಟಮ್ ತಂತ್ರಜ್ಞಾನ ತರಬೇತಿ, ವರ್ಚ್ಯುವಲ್ ಪ್ರಯೋಗಾಲಯ ಮತ್ತು ಉದ್ಯೋಗದ ಅವಕಾಶ ಸಿಗಲಿದೆ ಎಂದು ‘ಎಕ್ಸ್’ನಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.