ADVERTISEMENT

ಬೆಂಗಳೂರಿನಲ್ಲಿ ಕಚೇರಿ ಸ್ಥಳ ಬಾಡಿಗೆ ಪಡೆದ ಆ್ಯಪಲ್

ಪಿಟಿಐ
Published 18 ಆಗಸ್ಟ್ 2025, 15:58 IST
Last Updated 18 ಆಗಸ್ಟ್ 2025, 15:58 IST
ಆ್ಯಪಲ್
ಆ್ಯಪಲ್   

ನವದೆಹಲಿ: ಐಫೋನ್ ತಯಾರಿಕಾ ಕಂಪನಿ ಆ್ಯಪಲ್‌ ಇಂಡಿಯಾ, ಬೆಂಗಳೂರಿನಲ್ಲಿ 2.7 ಲಕ್ಷ ಚದರ ಅಡಿ ವಿಸ್ತೀರ್ಣದ ಕಚೇರಿ ಸ್ಥಳವನ್ನು 10 ವರ್ಷದ ಅವಧಿಗೆ ಬಾಡಿಗೆಗೆ ತೆಗೆದುಕೊಂಡಿದೆ.

ಪ್ರತಿ ಚದರ ಅಡಿಗೆ ಮಾಸಿಕ ಬಾಡಿಗೆ ₹235 ಆಗಿದ್ದು, ಒಟ್ಟು ₹6.3 ಕೋಟಿ ಆಗಲಿದೆ. ವಾರ್ಷಿಕವಾಗಿ ಬಾಡಿಗೆ ದರವು ಶೇ 4.5ರಷ್ಟು ಹೆಚ್ಚಳವಾಗಲಿದೆ. ಆ್ಯಪಲ್‌ ಕಂಪನಿಯು ₹31.57 ಕೋಟಿ ಠೇವಣಿ ಪಾವತಿ ಮಾಡಿದೆ. ಬಾಡಿಗೆ, ಕಾರು ನಿಲುಗಡೆಗೆ ಸ್ಥಳ ಮತ್ತು ನಿರ್ವಹಣೆ ಶುಲ್ಕಕ್ಕೆ ಹತ್ತು ವರ್ಷದಲ್ಲಿ ಪಾವತಿಸುವ ಮೊತ್ತವು ಅಂದಾಜು ₹1 ಸಾವಿರ ಕೋಟಿ ದಾಟಲಿದೆ.

ರಿಯಲ್‌ ಎಸ್ಟೇಟ್‌ ಸಂಸ್ಥೆ ಎಂಬಸಿ ಸಮೂಹದ ಎಂಬಸಿ ಜೆನಿತ್‌ನಲ್ಲಿನ 5ನೇ ಮಹಡಿಯಿಂದ 13ನೇ ಮಹಡಿವರೆಗೆ ಬಾಡಿಗೆ ತೆಗೆದುಕೊಂಡಿದೆ. ಏಪ್ರಿಲ್ 3ರಿಂದ ಬಾಡಿಗೆ ಪಡೆದುಕೊಂಡಿದೆ ಎಂದು ರಿಯಲ್ ಎಸ್ಟೇಟ್ ದತ್ತಾಂಶ ವಿಶ್ಲೇಷಣೆ ಸಂಸ್ಥೆ ಪ್ರಾಪ್‌ಸ್ಟ್ಯಾಕ್ ತಿಳಿಸಿದೆ.

ADVERTISEMENT

ಈ ಕುರಿತು ಆ್ಯಪಲ್ ಕಂಪನಿಗೆ ಸುದ್ದಿಸಂಸ್ಥೆ ಕಳಿಸಿದ ಇ–ಮೇಲ್‌ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್, ಭಾರತದಲ್ಲಿ ತಯಾರಿಕಾ ಚಟುವಟಿಕೆ ವಿಸ್ತರಿಸದಂತೆ ಆ್ಯಪಲ್‌ ಕಂಪನಿಗೆ ಇತ್ತೀಚೆಗೆ ಬಹಿರಂಗವಾಗಿ ಹೇಳಿದ್ದರು. ಇದರ ನಡುವೆಯೇ ಆ್ಯಪಲ್‌ ಈ ಹೊಸ ಹೂಡಿಕೆ ಮಾಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.